ಕಾರ್ಕಳ:(ಆ.5) ಶ್ರೀ ವಿಷ್ಣು ಪ್ರೆಂಡ್ಸ್ ಅಜೆಕಾರು ಮತ್ತು ಶ್ರೀ ವಿಷ್ಣು ಮಹಿಳಾ ಘಟಕ ಅಜೆಕಾರು ಮರ್ಣೆ ಇದರ ಆಶ್ರಯದಲ್ಲಿ ದ್ವಿತೀಯ ವರ್ಷದ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ಬಾಂಧವರಿಗೆ ಕೆಸರುಡು ಒಂಜಿ ದಿನ ಕಾರ್ಯಕ್ರಮವು ಅಜೆಕಾರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಗದ್ದೆಯಲ್ಲಿ ನಡೆಯಿತು.
ಇದನ್ನೂ ಓದಿ: 🚌ಮದ್ದಡ್ಕ; ಮದ್ದಡ್ಕ ಬಳಿ ಕೆಟ್ಟು ನಿಂತ ಕೆ ಎಸ್ ಆರ್ ಟಿ ಸಿ ಬಸ್
ಈ ಸಂದರ್ಭದಲ್ಲಿ ವೇದಮೂರ್ತಿ ಕೃಷ್ಣ ಮೂರ್ತಿ ಭಟ್ ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಭಾಸ್ಕರ ಶೆಟ್ಟಿ ಕುಂಠಿನಿ, ತುಳುನಾಡ ತುಡರ್ ನಮ್ಮ ತುಳುನಾಡ್ ಟ್ರಸ್ಟ್ ರಾಜ್ಯ ಸಂಚಾಲಕರು ಕೀರ್ತಿ ಕಾಕ೯ಳ , ಪ್ರಶಾಂತ್ ಶೆಟ್ಟಿ ಕುಂಠಿನಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಹರೀಶ್ ನಾಯಕ್, ಮಹಿಳಾ ಪ್ರಮುಖರಾದ ಶ್ರೀಮತಿ ವಿದ್ಯಾ ಪೈ,
ಅಜೆಕಾರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷರಾದ ಬೋಜ ಮಡಿವಾಳ, ಭಜನಾ ಮಂಡಳಿಯ ಕೋಶಾಧಿಕಾರಿ ಡಾ. ಜನಾರ್ದನ ನಾಯಕ್, ಹಿಂದೂ ಸಂಘಟನಾ ಮುಖಂಡ ರತ್ನಾಕರ ಅಮೀನ್, ಕೆಸರುಡು ಒಂಜಿ ದಿನ ಈ ಕಾರ್ಯಕ್ರಮದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಜನಪ್ರಿಯ ರೈಸ್ ಮಿಲ್ ನ ಮಂಜುನಾಥ್ ಉಪಸ್ಥಿತರಿದ್ದರು.