Tue. Apr 8th, 2025

Udupi: ಯುವತಿ ಅಸ್ವಸ್ಥ, ನೇರ ಆಸ್ಪತ್ರೆಗೆ ಧಾವಿಸಿದ ಖಾಸಗಿ ಬಸ್ಸು- ಬಸ್ಸಿನ ಚಾಲಕ, ನಿರ್ವಾಹಕನ ಮಾನವೀಯತೆಗೆ “ಹ್ಯಾಟ್ಸಾಪ್” ಎಂದ ಪ್ರಯಾಣಿಕರು

ಉಡುಪಿ:(ಆ.5) ಮತ್ತೊಮ್ಮೆ ಮಾನವೀಯತೆ ಮೆರೆದು ಕರಾವಳಿಯ ಖಾಸಗಿ ಬಸ್ ನ ಚಾಲಕ – ನಿರ್ವಾಹಕರು ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: 🚌ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತ ಅಶ್ವಮೇಧ ಕೆ.ಎಸ್.ಆರ್.ಟಿ.ಸಿ. ಬಸ್

ಅಸ್ವಸ್ಥ ಗೊಂಡ ಯುವತಿಗಾಗಿ ಬಸ್ ಅನ್ನೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಉಡುಪಿ ನಗರದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಘಟನೆ ನಡೆದಿತ್ತು. ಭಾರೀ ಪ್ರಶಂಸೆ ವ್ಯಕ್ತವಾಗಿದೆ‌

ನವೀನ್ ಬಸ್ ನ ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.

ಶಿರ್ವ ದಿಂದ ಉಡುಪಿಗೆ ಬರುತ್ತಿದ್ದ ನವೀನ್ ಎಂಬ ಬಸ್ ನಲ್ಲಿ ನಡೆದ ಘಟನೆ ನಡೆದಿದ್ದು ಬಸ್ ಉಡುಪಿಯ ಹಳೆ ತಾಲ್ಲೂಕು ಕಚೇರಿ ಬರುವಾಗ ಯುವತಿ ಅಸ್ವಸ್ಥಳಾಗಿದ್ದಾಳೆ.

ಬಸ್ ನಲ್ಲೇ ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಯುವತಿಯನ್ನು ತಕ್ಷಣವೇ ಹತ್ತಿರದ ಡಾಕ್ಟರ್ ಟಿಎಂಎ ಪೈ ಆಸ್ಪತ್ರೆಗೆ ‌ಬಸ್ ಅನ್ನು ಕೊಂಡೊಯ್ದು ಸಮಯ ಪ್ರಜ್ಞೆ ಮೆರೆದಿದ್ದಾರೆ‌

ನೇರವಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಬಸ್ ಚಾಲನೆ ಮಾಡಿ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಟ್ಟರು.

ಯುವತಿಯ ಮನೆಯವರಿಗೆ ಮಾಹಿತಿ ನೀಡಿ ಮನೆಯವರು ಬರುವ ತನಕ ಯುವತಿಗೆ ಚಿಕಿತ್ಸೆಗೆ ಸಹಕಾರ ನೀಡಿದ ಬಸ್ ಸಿಬ್ಬಂದಿಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ‌.

Leave a Reply

Your email address will not be published. Required fields are marked *