Wed. Nov 20th, 2024

Belthangadi: (ಆ.11) ಕ್ರೈಸ್ತ ಸಂಘಟನೆಗಳಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿʼಸೋಜಾ ರವರಿಗೆ ಅಭಿನಂದನಾ ಕಾರ್ಯಕ್ರಮ

ಬೆಳ್ತಂಗಡಿ:(ಆ.6) ಸಂಯುಕ್ತ ಕ್ರೈಸ್ತ ಸಂಘಟನೆ ಬೆಳ್ತಂಗಡಿ ವತಿಯಿಂದ ಆ.11 ರಂದು ಸೇಕ್ರೆಡ್ ಹಾರ್ಟ್ ಕಮ್ಯುನಿಟಿ ಹಾಲ್ ಮಡಂತ್ಯಾರ್‌ ನಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾಗಿ ದ್ವಿತೀಯ ಅವಧಿಗೆ ಆಯ್ಕೆಯಾದ ಗೌರವಾನ್ವಿತ ಐವನ್ ಡಿಸೋಜಾ ಇವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಗಿದೆ ಎಂದು ಕಥೋಲಿಕ್ ಸಭಾ ಬೆಳ್ತಂಗಡಿಯ ಅಧ್ಯಕ್ಷರಾದ ಲಿಯೋ ರೊಡ್ರಿಗಸ್ ತಿಳಿಸಿದ್ದಾರೆ.

ಇದನ್ನೂ ಓದಿ: 🛑ಬೆಂಗಳೂರು: ಸಿದ್ದರಾಮಯ್ಯನವರೇ ಆರೋಪಿ ನಂಬರ್ 1- ಬಿ.ವೈ. ವಿಜಯೇಂದ್ರ

ಕಥೋಲಿಕ್ ಸಭಾ ಬೆಳ್ತಂಗಡಿ ವಲಯ, ಚರ್ಚ್ ಪಾಲನಾ ಮಂಡಳಿ ಬೆಳ್ತಂಗಡಿ ವಲಯ, ಆಲ್ ಇಂಡಿಯಾ ಕಥೋಲಿಕ್ ಯೂನಿಯನ್, ಕೆ.ಎಸ್.ಎಂ.ಸಿ.ಎ ಬೆಳ್ತಂಗಡಿ ಧರ್ಮಪ್ರಾಂತ್ಯ, ಐ.ಪಿ.ಸಿ ಚರ್ಚ್ ಕರ್ನಾಟಕ, ನ್ಯೂ ಲೈಫ್ ಫೆಲೋಶಿಪ್ ಕರ್ನಾಟಕ ಇವುಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿʼಸೋಜಾರವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ| ಲಾರೆನ್ಸ್ ಮುಕ್ಕುಯಿ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕಥೋಲಿಕ್ ಸಭಾ ಬೆಳ್ತಂಗಡಿ ವಲಯದ ಆಧ್ಯಾತ್ಮಿಕ ನಿರ್ದೇಶಕರು ಹಾಗೂ ಬೆಳ್ತಂಗಡಿ ವಲಯದ ಪ್ರಧಾನ ಗುರುಗಳಾದ ರೇ। ಫಾ। ಡಾ। ವಾಲ್ಟರ್ ಡಿಮೆಲ್ಲೊ, ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರಿನ ಧರ್ಮಗುರುಗಳಾದ ಡಾ। ಸ್ಟೇನಿ ಗೋವಿಯಸ್ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಖ್ಯಾತ ವಕೀಲರು ಹಾಗೂ ಆಲ್ ಇಂಡಿಯಾನ್ ಕ್ಯಾಥೋಲಿಕ್ ಯೂನಿಯನ್ ಕರ್ನಾಟಕ ಇದರ ಅಧ್ಯಕ್ಷರಾದ ಸೇವಿಯರ್ ಪಾಲೇಲಿ ಇವರು ಅಭಿನಂದನಾ ಭಾಷಣ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದ ಮುಂದಿರುವ ಈಗಿನ ಸವಾಲುಗಳು ಹಾಗೂ ಸಂಘಟನೆಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ಕಾರ್ಯಾಗಾರವೂ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ಜೆರಾಲ್ಡ್ ಮೋರಾಸ್, ವಿನ್ಸೆಂಟ್ ಡಿʼಸೋಜ, ಸುಪ್ರಿತ್ ಫರ್ನಾಂಡೀಸ್ ಉಪಸ್ಥಿತರಿದ್ದು, ಮಾಹಿತಿಗಳನ್ನು ನೀಡಿದರು.

Leave a Reply

Your email address will not be published. Required fields are marked *