ಬೆಂಗಳೂರು :(ಆ.6) ವಾಯುವಿಹಾರಕ್ಕೆ ಬಂದಿದ್ದ ಮಹಿಳೆಯನ್ನು ಎಳೆದಾಡಿ ಚುಂಬಿಸಿ ಪರಾರಿಯಾಗಿದ್ದವನನ್ನು ಬೆಂಗಳೂರಿನ ಕೋಣನಕುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಇದನ್ನೂ ಓದಿ: 🛑ಮಂಗಳೂರು : ಮಂಗಳೂರಿನಿಂದ ನಾಪತ್ತೆಯಾದ ಯುವತಿ ಕಾರ್ಕಳದ ಪ್ರಿಯತಮನ ಮನೆಯಲ್ಲಿ ಪತ್ತೆ
ಕ್ಯಾಬ್ ಚಾಲಕ 25 ವರ್ಷದ ಸುರೇಶ್ ಬಂಧಿತ ಆರೋಪಿ.
ಆಗಸ್ಟ್ 2ರಂದು ಬೆಳಗಿನ ಜಾವ ಐದು ಗಂಟೆ ಕೋಣನಕುಂಟೆ ಬಳಿಯ ಕೃಷ್ಣಾನಗರದ ಪಾರ್ಕ್‌ಗೆ ವಾಕಿಂಗ್‌ಗೆ ಬಂದಿದ್ದ ಮಹಿಳೆಯನ್ನು ಬಲವಂತವಾಗಿ ತಬ್ಬಿ ಹಿಡಿದು ಚುಂಬಿಸಿ ಎಸ್ಕೇಪ್ ಆಗಿದ್ದ. ಇದೀಗ ಘಟನೆ ನಡೆದು ಮೂರು ದಿನಗಳ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ಮಾಡಿದ ಆರೋಪದಡಿಯಲ್ಲಿ ಕೋಣನಕುಂಟೆ ಪೊಲೀಸ್ ಠಾಣೆಯ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಆಗಸ್ಟ್ 02ರ ಬೆಳಗಿನ ಜಾವ 5ರ ಸುಮಾರಿಗೆ ಕೋಣನಕುಂಟೆ ಬಳಿಯ ಕೃಷ್ಣಾನಗರದಲ್ಲಿ ವಾಕಿಂಗ್ ಎಂದು ರಸ್ತೆ ಬದಿ ನಿಂತಿದ್ದ ಮಹಿಳೆಯನ್ನ ಬಂಧಿತ ಆರೋಪಿ ಸುರೇಶ್ ಬಲವಂತವಾಗಿ ತಬ್ಬಿ ಹಿಡಿದು ಚುಂಬಿಸಿದ್ದ. ನಂತರ ಆಕೆ ತಪ್ಪಿಸಿಕೊಂಡು ಬಂದರೂ ಸಹ ಹಿಂದೆ ಬಂದು ಹಿಂಸೆ ನೀಡಿದ್ದ. ಈ ಘಟನೆಯಿಂದ ಭಯಗೊಂಡು ಮುಜುಗರಕ್ಕೊಳಗಾಗಿದ್ದ ಮಹಿಳೆ ವಾಕಿಂಗ್‌ಗೆ ತೆರಳದೆ ಮನೆಗೆ ತೆರಳಿದ್ದರು. ಅಲ್ಲದೇ ಪೊಲೀಸರಿಗೆ ದೂರು ನೀಡಲು ಸಹ ಹಿಂಜರಿದಿದ್ದರು.
ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೋಣನಕುಂಟೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡು ಆರೋಪಿಗಾಗಿ ಹುಡಕಾಟ ನಡೆಸಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ಸರಿಯಾದ ರೀತಿ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಸರಿಯಾದ ರೀತಿ ಕ್ರಮ ತೆಗೆದುಕೊಂಡಿಲ್ಲ ಎಂದು ನಿರ್ಲಕ್ಷ್ಯ ಆರೋಪದಡಿಯಲ್ಲಿ ಪ್ರಕರಣ ಸಂಬಂಧ ಕೋಣನಕುಂಟೆ ಠಾಣೆಯ ಮೂವರು ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ.