ಮೇಷ ರಾಶಿ: ಆಸ್ತಿಯ ಬಗ್ಗೆ ಕಾನೂನಾತ್ಮಕವಾಗಿ ಇರಬೇಕಾಗುವುದು. ನಿಮ್ಮ ಹಣವು ಹೋಗಬೇಕಾದ ವ್ಯಕ್ತಿಗೆ ಹೋಗದೇ ತಪ್ಪಿ ಇನ್ನೊಬ್ಬರಿಗೆ ಹೋಗಿ ನಿಮಗೆ ತೊಂದರೆ ಆದೀತು. ಹಿರಿಯರ ಮಾತಿಗೆ ಅಗೌರವ ಬೇಡ. ಸಮೂಹದಲ್ಲಿ ಇರುವಾಗ ಎಲ್ಲರ ಮಾತಿಗೂ ಬೆಲೆ ಕೊಡಬೇಕಾಗುವುದು.
ವೃಷಭ ರಾಶಿ: ಅಸ್ಪಷ್ಟ ಮಾಹಿತಿಗಳು ನಿಮ್ಮ ದಿಕ್ಕು ತಪ್ಪಿಸಬಹುದು. ಅದೃಷ್ಟವನ್ನು ಹುಡುಕುತ್ತಿದ್ದರೆ ಅದಕ್ಕೆ ನಿಮ್ಮ ಅನುವರ್ತಿತ್ವವೂ ಇರಲಿ. ಅತಿಯಾದ ಪ್ರಯಾಣದಿಂದ ಆಯಾಸ ಮತ್ತು ಒತ್ತಡಗಳು ನಿರ್ಮಾಣವಾಗುವುದು. ಆರೋಪದ ಬಗ್ಗೆ ಗಂಭೀರವಾದ ನಿರ್ಧಾರವನ್ನು ತೆಗದುಕೊಳ್ಳಲಾರಿರಿ. ಆಕಸ್ಮಿಕ ಧನದಿಂದ ಸಂತೋಷವಾಗಲಿದೆ.
ಮಿಥುನ ರಾಶಿ: ಅಧಿಕಾರವನ್ನು ನಡೆಸಲು ಕೇವಲ ಬುದ್ಧಿ ಜ್ಞಾನ ಸಾಲದು. ಎದೆಗಾರಿಕೆ ಹಾಗೂ ತಂತ್ರವೂ ಬೇಕು. ನಿಯಮಗಳು ನಿಮಗೆ ತೊಂದರೆಯಾದೀತು. ಅದನ್ನು ಮುರಿಯಲು ನೀವು ಪ್ರಯತ್ನಿಸಬಹುದು. ನಿಮಗೆ ಮಾರ್ಗದರ್ಶನ ಮಾಡಲು ಯಾರಾದರೂ ಬರಬಹುದು.

ಕರ್ಕಾಟಕ ರಾಶಿ: ಮೇಲಧಿಕಾರಿಗಳಿಂದ ನಿಮಗೆ ಒತ್ತಡ ಹೆಚ್ಚಾಗುವುದು. ನಿಮ್ಮ ಎಲ್ಲ ಕಾರ್ಯವನ್ನೂ ಗಮನಿಸುವರು. ಇಂದು ನಿಮಗೆ ಬೆಳಗ್ಗೆಯಿಂದ ಮನಸ್ಸು ಜಾಡ್ಯದಿಂದ ಇರಲಿದೆ. ಸ್ವಾಭಿಮಾನದ ವಿಚಾರಕ್ಕೆ ಬಂದರೆ ನೀವು ಬಹಳ ನಿಷ್ಠುರರು. ಯಾರ ಸಹಾಯವನ್ನೂ ಬಾಯೊಡೆದು ಕೇಳುವ ಜಾಯಮಾನವಲ್ಲ.
ಸಿಂಹ ರಾಶಿ: ಹಿತ್ತಾಳೆ ಕಿವಿಯಿಂದ ಸಂಬಂಧವು ಹಾಳಾಗುವುದು. ಹೊಸ ಉದ್ಯಮಕ್ಕೆ ಬಂಡವಾಳ ಹಾಕುವುದು ಸದ್ಯ ಮುಂದುವರಿಯುವುದು ಬೇಡ. ನ್ಯಾಯಾಲಯದ ಮೆಟ್ಟಲೇರುವ ಸಂದರ್ಭವನ್ನು ನೀವು ತಂದುಕೊಳ್ಳುವುದು ಬೇಡ. ಬೆಟ್ಟ ಗುಡ್ಡಗಳನ್ನು ಸುತ್ತುವುದು ನಿಮಗೆ ಪ್ರಿಯವಾದ ಸಂಗತಿಯಾದೀತು.
ಕನ್ಯಾ ರಾಶಿ: ಎಲ್ಲವನ್ನು ನೀವು ಕಲ್ಪಿಸಿಕೊಂಡು ಅನಂತರ ಸಂಕಟಪಡುವಿರಿ. ಇಂದು ಮನೆಯ ಸಣ್ಣ ಖರ್ಚುಗಳೂ ದೊಡ್ಡದಾದ ಮೊತ್ತವನ್ನು ಕಳೆಯುವುದು. ನಿಮಗೆ ದಂಪತಿಯ ಜೊತೆ ಪುಣ್ಯಸ್ಥಳಗಳ ಭೇಟಿ ಮಾಡುವ ಬಯಕೆ ಇರಲಿದೆ. ಪತ್ನಿಗಾಗಿ ಅಚ್ಚರಿಯ ಉಡುಗೊರೆಯೊಂದನ್ನು ನೀವು ಕೊಡುವಿರಿ.

ತುಲಾ ರಾಶಿ: ಭೂಮಿ ವ್ಯವಹಾರದಲ್ಲಿ ಅನಿರೀಕ್ಷಿತ ಆದಾಯವು ಆಗುವುದು. ನೀವು ಅನುಮಾನ ಬರುವಂತಹ ವರ್ತನೆಯನ್ನು ತೋರಿಸುವಿರಿ. ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಇರಲು ಪ್ರಯತ್ನಿಸಿ. ನಿಮ್ಮ ಕೆಲಸವು ಮಂದಗತಿಯಲ್ಲಿ ಸಾಗಬಹುದು. ಮನೆಯ ನಿರ್ಮಾಣವೂ ನಿಧಾನವಾಗಿ ನಿಮಗೆ ಬೇಸರವಾದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಬೆಳವಣಿಗೆ ಕಾಣಿಸುವುದು.
ವೃಶ್ಚಿಕ ರಾಶಿ: ಉದ್ಯೋಗದಿಂದ ಹೊರಬಂದು ಮನೆಯ ಬಗ್ಗೆ ಗಮನ ಹೆಚ್ಚಾಗುವುದು. ಇಂದು ನಿಮ್ಮ ಕಲ್ಪನೆಯಂತೆ ಬದುಕು ನಡೆಯದು ಎಂಬ ಸತ್ಯ ತಿಳಿಯುವುದು. ದೂರಪ್ರಯಾಣ ಸುಖಕರವಾಗಿ ಇರುವುದಾದರೂ ಅನಂತರ ಕಷ್ಟಪಡಬೇಕಾದೀತು. ನೀವು ಇಂದು ಕುಟುಂಬದ ವೃತ್ತಿಯಲ್ಲಿ ಮುಂದುವರಿಯುವ ಆಸೆ ಬರುವುದು.
ಧನು ರಾಶಿ: ಆದಾಯದಲ್ಲಿ ಹಿನ್ನಡೆ ಆಗುವುದು. ಆರ್ಥಿಕ ವಿಚಾರಕ್ಕೆ ಸಂಗಾತಿಯ ಜೊತೆ ವೈಮನಸ್ಯ ಉಂಟಾಗುವುದು. ಮನೆಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಯಾರ ಬಗ್ಗೆಯೂ ತಿಳಿಯದೇ ಮಾತನಾಡುವುದು ನಿಮಗೆ ಉಚಿತವಲ್ಲ. ವಂಚನೆಗೆ ನೀವು ಬೆಲೆಯನ್ನು ಕೊಡಬೇಕಾದೀತು. ಇಂದಿನ ಕೆಲವು ಅಂಶಗಳು ನಿಮಗೆ ಪಾಠವಾಗಲಿವೆ.

ಮಕರ ರಾಶಿ: ನಿರುದ್ಯೋಗದ ಕಾರಣಕ್ಕೆ ಎಲ್ಲರೂ ನಿಮ್ಮನ್ನು ತಮಾಷೆ ಮಾಡಬಹುದು. ನೀವು ಸಣ್ಣ ಬುದ್ಧಿಯನ್ನು ಬಿಟ್ಟು ವ್ಯವಹರಿಸಿದರೆ ವ್ಯಾಪರಕ್ಕೆ ಅನುಕೂಲವಿದೆ. ಅನೇಕ ಶುಭಸೂಚನೆಗಳು ನಿಮಗೆ ಕಾಣಿಸುವುದು. ನಿಮ್ಮದೇ ಹಣವಾದರೂ ನೀವು ಅದನ್ನು ಪಡೆಯಲು ಓಡಾಟ ಮಾಡಬೇಕಾದೀತು.
ಕುಂಭ ರಾಶಿ: ನಿಮ್ಮ ವೃತ್ತಿಯ ಆದಾಯಕ್ಕಿಂತ ಬೇರೆ ಕಡೆಯಿಂದ ಆದಾಯ ಸಿಗಲಿದೆ. ಇಂದು ನಿಮ್ಮ ಕೆಲವು ಮಾತುಗಳು ಬೇರೆಯವರು ಆತುರದ ನಿರ್ಧಾರವನ್ನು ತೆಗದುಕೊಳ್ಳುವಂತೆ ಮಾಡಬಹುದು. ಇಂದು ನಿಮ್ಮ ಸ್ನೇಹ ಸಂಬಂಧವು ಸಡಿಲಾಗುವ ಸಾಧ್ಯತೆ ಇದೆ. ಅಗ್ನಿ, ವಿದ್ಯುತ್ ಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಜಾಗರೂಕತೆ ಇರಲಿ.
ಮೀನ ರಾಶಿ: ಪರರ ಭಾಗ್ಯವನ್ನು ನೆನೆದು ಕೊರಗುವುದಕ್ಕಿಂತ ನಿಮ್ಮ ಇರುವ ಭಾಗ್ಯವನ್ನು ನೆನೆದು ಸಂತೋಷಪಡಿ. ಧಾರ್ಮಿಕ ಕಾರ್ಯಗಳಿಂದ ಉತ್ತಮ ಯಶಸ್ಸು ಪ್ರಾಪ್ತಿಯಾಗುವುದು. ನಿಮಗೆ ತೋರಿದ ಪ್ರೀತಿಯನ್ನು ಉಳಿಸಿಕೊಳ್ಳಬೇಕಾಗುವುದು. ತೆರಿಗೆಗೆ ಸಂಬಂಧಿಸಿದಂತೆ ನಿಮ್ಮ ದಾಖಲೆಗಳು ಸರಿಯಾಗಿರಲಿ.
