ಮಂಗಳೂರು:(ಆ.6) ಮಂಗಳೂರಿನ ಪಬ್ ವೊಂದರಲ್ಲಿ ವಿಟ್ಲ ಮೂಲದ ಯುವತಿಗೆ ಕಿರುಕುಳ ನೀಡಿದ ಆರೋಪದಡಿ ಪುತ್ತೂರು ಮೂಲದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿ ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಪುತ್ತೂರಿನ ಮಹೇಶ್ (28), ವಿನಯ್ (30), ನಿತೇಶ್ (32) ಮತ್ತು ಪ್ರೀತೇಶ್ (33) ಬಂಧಿತ ಆರೋಪಿಗಳು.
ಇದನ್ನೂ ಓದಿ: 🛑ಕಾಶಿಬೆಟ್ಟು ಇಂಡಸ್ಟ್ರಿಯಲ್ ಎಸ್ಟೇಟ್ ನ ಉದ್ದಿಮೆದಾರರಿಂದ ಎಚ್ಚರಿಕೆ..!
ವಿಟ್ಲ ಮೂಲದ ಯುವತಿ ಶನಿವಾರ ಗೆಳತಿ ಜತೆ ಪಬ್ಗ ಹೋಗಿದ್ದರು. ಇದೇ ಪಬ್ಗೆ ಪುತ್ತೂರಿನ ಯುವಕರ ತಂಡ ಬಂದಿತ್ತು. ಈ ವೇಳೆ ತಂಡದಲ್ಲಿದ್ದ ಯುವಕನೊಬ್ಬ ಯುವತಿಗೆ ಕಿರುಕುಳ ನೀಡಿದ್ದು, ಆಕೆ ವಿರೋಧಿಸಿದ್ದಾಳೆ.
ಇದಾದ ಬಳಿಕವೂ ಯುವಕರು ಆಕೆಯ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಯುವತಿಯ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಓರ್ವ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಉಳಿದ ಮೂವರು ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿದೆ.