ಬಂದಾರು:(ಆ.7) ಬಂದಾರು ಗ್ರಾಮದ ಪೇರಲ್ದಪಲ್ಕೆ ಎಂಬಲ್ಲಿನ ಗುಡ್ಡಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ನಡೆಸುತ್ತಿದ್ದ ಕೋಳಿ ಅಂಕಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 🔶Vinesh Phogat: ಫೈನಲ್ ಸ್ಪರ್ಧೆಯಿಂದ ಹೊರಬಿದ್ದ ವಿನೇಶ್ ಫೋಗಟ್ – ಕೈತಪ್ಪಿದ ಒಲಿಂಪಿಕ್ಸ್ ಪದಕ
ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಕಿಶೋರ್ ಪಿ. ರವರು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದು, ಈ ವೇಳೆ ಕೋಳಿ ಅಂಕದಲ್ಲಿ ನಿರತರಾಗಿದ್ದ ದೇವಪ್ಪ ಉಮ್ಮನ ಗೌಡ, ಪರಮೇಶ್ವರ, ರಾಮಣ್ಣ ಬಾಲಕೃಷ್ಣ ಎಂಬ 5 ಮಂದಿಯನ್ನು ವಶಪಡಿಸಿಕೊಂಡಿದ್ದಾರೆ.
ಸದ್ರಿಯವರ ವಶದಿಂದ ಒಟ್ಟು ನಗದು ರೂ. 5410/- ರೂಪಾಯಿ, 3 ಹುಂಜ ಕೋಳಿಗಳು, 2 ಕೋಳಿ ಅಂಕಕ್ಕೆ ಬಳಸುವ ಕತ್ತಿಗಳನ್ನು ಹಾಗೂ ಸ್ಥಳದಲ್ಲಿದ್ದ 04 ದ್ವಿಚಕ್ರ ವಾಹನಗಳನ್ನು ಸ್ವಾಧೀನ ಪಡೆಸಿಕೊಂಡಿದ್ದು, ಪ್ರಕರಣದ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2024 ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.