Wed. Nov 20th, 2024

Bantwala: ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ – ಆರೋಪಿಗಳ ಬಂಧನ

ಬಂಟ್ವಾಳ:(ಆ.7) ವೈಯಕ್ತಿಕ ಕ್ಷುಲ್ಲಕ ವಿಚಾರವಾಗಿ ಮಾತಿಗೆ ಮಾತು ಬೆಳೆದು ಚೂರಿಯಿಂದ ಇರಿದು ಪರಾರಿಯಾಗಿದ್ದ ಆರೋಪಿಗಳ ಪೈಕಿ ಮೂವರನ್ನು ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಅನಂತಪದ್ಮನಾಭ ಹಾಗೂ ಎಸ್.ಐ.ರಾಮಕೃಷ್ಣ ನೇತೃತ್ವದ ತಂಡ ಬಂಧಿಸಿದೆ.

ಇದನ್ನೂ ಓದಿ: 🔴ದೆಹಲಿ: ಪ್ರಧಾನಿ ನರೇಂದ್ರಮೋದಿಯವರನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ

ಬಂಟ್ವಾಳ ನಿವಾಸಿಗಳಾದ ಅಶ್ವಥ್, ಶರಣ್ ಮತ್ತು ವಸಂತ ಎಂಬವರು ಬಂಧಿತ ಆರೋಪಿಗಳು. ಉಳಿದ ಆರೋಪಿಗಳಿಗಾಗಿ ಬಂಟ್ವಾಳ ಪೋಲೀಸರು ಬಲೆ ಬೀಸಿದ್ದು ಕಾರ್ಯಾಚರಣೆ ಮುಂದುವರಿದಿದೆ.

ಚೂರಿ ಇರಿದ ಪ್ರಮುಖ ಆರೋಪಿಗಳನ್ನು ಪೋಲೀಸರು ಬಂದಿಸಿದ್ದು,ಉಳಿದಂತೆ ಇವರ ಜೊತೆಯಲ್ಲಿ ಸ್ಥಳದಲ್ಲಿದ್ದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ಪೃಥ್ವಿರಾಜ್ ಮತ್ತು ವಿನೀತ್ ಅವರು ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ:
ವೈಯಕ್ತಿಕ ಕ್ಷುಲ್ಲಕ ವಿಚಾರವಾಗಿ ಬಂಟ್ವಾಳ ಬೈಪಾಸ್ ಎಂಬಲ್ಲಿ ಎರಡು ತಂಡಗಳ ನಡುವೆ ರಾಜರಸ್ತೆಯಲ್ಲಿ ಪರಸ್ಪರ ಗಲಾಟೆ ನಡೆದಿದೆ. ಮುಂದುವರಿದು ಚೂರಿಯಿಂದ ಇರಿದು ಒಂದು ತಂಡ ಪರಾರಿಯಾಗಿತ್ತು. ಗಾಯಗೊಂಡ ಯುವಕರನ್ನು ಆರಂಭದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮತ್ತೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Leave a Reply

Your email address will not be published. Required fields are marked *