ಮೇಷ ರಾಶಿ : ಆರ್ಥಿಕ ಉಳಿತಾಯವನ್ನು ಅನ್ಯರಿಂದ ಕೇಳಿ ಪಡೆಯುವುದು ಉಚಿತ. ಪ್ರೀತಿಪಾತ್ರರ ಜೊತೆ ಇಂದು ವಿಹಾರ ಮಾಡುವಿರಿ. ನಿಮ್ಮ ಮಾತುಗಳೇ ನಿಮಗೆ ತಿರುಗುಬಾಣವಾಗಿ ಬರಬಹುದು. ನೀವು ಇಂದು ವಾಹನಕ್ಕೆ ಸಂಬಂಧಿಸಿದಂತೆ ಹಣವನ್ನು ವ್ಯಯಿಸಬೇಕಾಗಬಹುದು.
ವೃಷಭ ರಾಶಿ : ನಿಮ್ಮದಲ್ಲದ ತಪ್ಪಿಗೂ ನೀವು ಕ್ಷಮೆಯನ್ನು ಕೇಳಬೇಕಾಗುವುದು. ಬರಬೇಕಾದ ಹಳೆಯ ಬಾಕಿಗಳು ಇಂದು ಬಂದು ಸೇರಲಿದೆ. ಸಂತೋಷ ಪಡಲು ನೀವು ನಿಮ್ಮದೇ ಮಾರ್ಗವನ್ನು ಕಂಡುಕೊಳ್ಳುವಿರಿ. ನೋವನ್ನು ಸ್ವಲ್ಪ ಕಾಲ ಮರೆಯುವಿರಿ. ಅನವಶ್ಯಕ ವಿಚಾರಕ್ಕೆ ನೀವು ಸಮಯವನ್ನು ಕೊಡುವಿರಿ.
ಮಿಥುನ ರಾಶಿ : ಮೇಲಧಿಕಾರಿಗಳ ಜೊತೆ ಮನಸ್ತಾಪ ಬರಬಹುದು. ಇನ್ನೊಬ್ಬರ ಮಾತನ್ನು ಪೂರ್ಣವಾಗಿ ನಂಬಿ ನಿಮ್ಮವರನ್ನು ಕಳೆದುಕೊಳ್ಳಲಿದ್ದೀರಿ. ನಿಮಗೆ ಇಂದು ಮಕ್ಕಳ ಕಡೆಯಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಮನಸ್ಸಿನ ತೊಳಲಾಟದಿಂದ ನಿಮಗೆ ಕಷ್ಟವಾಗಬಹುದು. ಏಕಾಗ್ರವಾಗಿ ಕೆಲಸ ಮಾಡಲಾಗದು.
ಕರ್ಕ ರಾಶಿ : ವೃತ್ತಿಯಲ್ಲಿ ಮೇಲೇರಿದ ಅನುಭವ ಆಗಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದ್ದನ್ನು ತುರ್ತಾಗಿ ಮಾಡುವಿರಿ. ನೀವು ಬದಲಿಸಿಕೊಂಡ ಜೀವನಶೈಲಿಯ ಬಗ್ಗೆ ಕೆಲಸವರು ಆಡಿಕೊಳ್ಳಬಹುದು. ದಾಂಪತ್ಯದಲ್ಲಿ ವಿರಸದ ಮನೋಭಾವವು ಮುಂದುವರಿಯಬಹುದು. ಆತುರದಿಂದ ಕಾರ್ಯಗಳು ಹಾಳಾಗುವುದು. ಚಾಡಿಯಿಂದ ಯಾರನ್ನಾದರೂ ಹಾಳು ಮಾಡುವ ಕೆಲಸವು ನಿಮ್ಮಿಂದ ಆದೀತು.

ಸಿಂಹ ರಾಶಿ : ಸಂಬಂಧಗಳನ್ನು ನಿರ್ವಹಿಸುವುದು ಕಷ್ಟವಾದೀತು. ಕೆಲಸಗಳಲ್ಲಿ ಹಿನ್ನಡೆಯಾಗಿ ಮೇಲಧಿಕಾರಿಗಳಿಂದ ಸೂಚನೆ ಬರಬಹುದು. ಕಛೇರಿಯ ಕೆಲಸದಲ್ಲಿ ವ್ಯತ್ಯಾಸವಾದ ಕಾರಣ ಕಿರಿಕಿರಿಯಿಂದ ಕೋಪ ಉಂಟಾಗಬಹುದು. ಭೂ ವ್ಯವಹಾರದ ಕಾರಣದಿಂದ ಮನಸ್ಸು ವಿಚಲಿತ ಆಗಲಿದೆ. ರಾಜಕೀಯಕ್ಕೆ ಹೋಗಲು ನಿಮಗೆ ಬೆಂಬಲವು ಸಿಗಲಿದೆ. ನೀವೂ ಬಹಳ ಉತ್ಸುಕರಾಗಿರುವಿರಿ.
ಕನ್ಯಾ ರಾಶಿ : ಒಳಗೊಂದು ಹೊರಗೊಂದು ಸ್ವಭಾವವನ್ನು ತೋರಿಸುವುದು ಬೇಡ. ವೇಗವಾಗಿ ಸಾಲವನ್ನು ಮುಗಿಸಲು ನೀವು ಪ್ರಯತ್ನಿಸಬೇಕಾದೀತು. ಆಲಸ್ಯದಿಂದ ಹೊರಬಂದು ಆ ಕುರಿತು ಆಲೋಚಿಸಿ. ಅದೃಷ್ಟವನ್ನು ನಂಬಿ ಕುಳಿತುಕೊಳ್ಳುವುದು ಬೇಡ. ನಿಮಗಾಗದ ಕಾರ್ಯವನ್ನು ನೇರವಾಗಿ ಹೇಳುವಿರಿ.
ತುಲಾ ರಾಶಿ : ಅನುಭವಿಗಳ ಮುಂದೆ ಮೌನವಾಗಿರುವುದು ಲೇಸು. ನೀವು ಇಂದು ಏನನ್ನೋ ಮಾಡಲು ಹೋಗಿ ಮತ್ತೇನೋ ಆಗಬಹುದು. ಮಕ್ಕಳಿಂದಾಗಿ ಆರ್ಥಿಕನಷ್ಟವನ್ನು ಕಾಣಬೇಕಾಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ದಾಂಪತ್ಯದಲ್ಲಿ ಬಿರಕು ಬರುವ ಸಾಧ್ಯತೆ ಇದೆ. ಆಪ್ತರ ಮಾತಿನಿಂದ ಮನಸ್ಸಿಗೆ ಘಾಸಿಯಾಗಬಹುದು.
ವೃಶ್ಚಿಕ ರಾಶಿ : ಇಂದು ನಿಮ್ಮ ಬಗ್ಗೆ ಕಪೋಲಕಲ್ಪಿತ ಸುದ್ದಿಗಳು ಹರಡಬಹುದು. ಸಂತರಿಗೆ ಸಮಾನವಾದ ವ್ಯಕ್ತಿಗಳಿಂದ ನಿಮಗೆ ಸಾಂತ್ವನ ಸಿಗಲಿದೆ. ನಿಮಗೆ ಸೌಕರ್ಯಗಳು ಅಧಿಕವಾಗಿ ಬೇಕು ಎನಿಸಬಹುದು. ಸ್ಥಾನಭ್ರಷ್ಟವಾಗುವ ಭಯವು ನಿಮಗೆ ಕಾಡಬಹುದು. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಕೆಲವು ಸಮಸ್ಯೆಯನ್ನು ಎದುರಿಸಬೇಕಾಗಬಹುದು.

ಧನು ರಾಶಿ : ಮಾನಸಿಕ ಅಸ್ಥಿರತೆಯಿಂದ ಜೊತೆಗಾರರಿಗೆ ಕಷ್ಟವಾಗಲಿದೆ. ಇಂದು ನಿಮ್ಮ ಮನೆಯ ಒತ್ತಡದದ ಕಾರಣ ಯಾವ ಕಾರ್ಯವನ್ನೂ ಪೂರ್ಣಗೊಳಿಸಲಾಗದು. ಹಣವನ್ನು ಸಂಪೂರ್ಣವಾಗಿ ಇತರೇತರ ಕಾರ್ಯಗಳಿಗೆ ಖರ್ಚು ಮಾಡಿ ತುರ್ತಿಗೆ ಹಣವಿಲ್ಲದಂತೆ ಮಾಡಿಕೊಳ್ಳುವಿರಿ. ಎಲ್ಲಿಗಾದರೂ ಹೋಗುವ ಸ್ವಾತಂತ್ರ್ಯ ನಿಮಗೆ ಇಂದು ಸಿಗಬಹುದು.
ಮಕರ ರಾಶಿ : ದಾಂಪತ್ಯದಲ್ಲಿ ಸಂತೋಷವಿರಲು ಹೊಸತನ ಬೇಕಾದೀತು. ಬೇಡದ್ದನ್ನೂ ಮನಸ್ಸಿನಲ್ಲಿ ಹಾಕಿಕೊಂಡು ಸಂಕಟಪಡುವಿರಿ. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಇಬ್ಬರಿಗೂ ಸಂತೋಷವಾಗಲಿದೆ. ನೀವಂದುಕೊಂಡಿದ್ದೇ ಸತ್ಯ ಎನ್ನುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಂಡಿದ್ದರೆ ಅದರಿಂದ ಹೊರಬರುವುದು ಒಳ್ಳೆಯದು.
ಕುಂಭ ರಾಶಿ : ಒತ್ತಡದಿಂದ ಕಾರ್ಯವನ್ನು ಮಾಡುವುದು ನಿಮಗೆ ಅಭ್ಯಾಸವಾಗಿದೆ. ಇಂದು ನೀವು ಭವಿಷ್ಯಕ್ಕಾಗಿ ಆರ್ಥಿಕತೆಯ ಬಗ್ಗೆ ಅಧಿಕ ಆಲೋಚನೆ ಮಾಡುವ ಸನ್ನಿವೇಶ ಬರಲಿದೆ. ನಿಮ್ಮ ಅಂತಸ್ಸತ್ತ್ವವೇ ಎಲ್ಲ ಕಾರ್ಯಗಳನ್ನು ಖುಷಿಯಿಂದ ಮಾಡಲು ಸಹಕಾರಿಯಾಗುವುದು. ಬಹಳ ದಿನಗಳಿಂದ ನಿಮ್ಮ ಆರೋಗ್ಯವು ಹಳಿ ತಪ್ಪಿದ್ದರೂ ನೀವು ನಿರ್ಲಕ್ಷ್ಯ ತೋರಿಸುತ್ತಿರುವುದು ಒಳ್ಳೆಯದಲ್ಲ.
ಮೀನ ರಾಶಿ : ಇಂದು ನಿಮ್ಮ ಕುಟುಂಬವು ಸಂತೋಷವಾಗಿ ಇರುವುದನ್ನು ಕಣ್ತುಂಬಿಕೊಳ್ಳುವಿರಿ. ಕುಂಟು ನೆಪವನ್ನು ಹೇಳಿ ಇಂದಿನ ಸುತ್ತಾಟವನ್ನು ತಪ್ಪಿಸಿಕೊಳ್ಳುವಿರಿ. ತಿಳಿವಳಿಕೆ ಇಲ್ಲದವರ ನಿಮ್ಮ ವ್ಯವಹಾರಗಳನ್ನು ಹೇಳಬೇಡಿ. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ನಿಮಗೆ ನಷ್ಟವಾಗಬಹುದು. ಇಂದು ಸ್ವಲ್ಪ ದೇಹಕ್ಕೂ ಮನಸ್ಸಿಗೂ ವಿಶ್ರಾಂತಿಯನ್ನು ನೀಡಿದರೆ ಒಳ್ಳೆಯದು. ಆಗಬೇಕಾಗಿರುವ ಕೆಲಸದ ಬಗ್ಗೆ ಗಮನ ಹರಿಸಿ ಮುಗಿಸುವುದು ಒಳ್ಳೆಯದು. ಜಾಡ್ಯವು ಅತಿಯಾದಂತೆ ತೋರುವುದು. ಅತಿಯಾದ ಸಲುಗೆಯು ದುರುಪಯೋಗವಾದೀತು.
