ಬೆಳ್ತಂಗಡಿ :(ಆ.9) ವಿದ್ಯಾರ್ಥಿಗಳು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉನ್ನತ ಸಾಧನೆಯನ್ನು ಮಾಡಬಹುದು ಎಂದು ವಾಣಿ ಶಿಕ್ಷಣ ಸಂಸ್ಥೆಯ ಜೊತೆ ಕಾರ್ಯದರ್ಶಿಗಳಾದ ಶ್ರೀನಾಥ್ ಕೆ.ಎಂ ಹೇಳಿದರು.

ಇದನ್ನೂ ಓದಿ: 🔵ಪುಂಜಾಲಕಟ್ಟೆ-ಚಾರ್ಮಾಡಿ ರಾ.ಹೆ. ಕಾಮಗಾರಿ ಮಾಡುತ್ತಿದ್ದ ಡಿ.ಪಿ.ಜೈನ್ ಕಂಪೆನಿಗೆ ಗೇಟ್ ಪಾಸ್
ಅವರು ವಾಣಿ ಪದವಿಪೂರ್ವ ಕಾಲೇಜಿನ ಕಂಪ್ಯೂಟರ್ ಸೈನ್ಸ್ ನ ಐಟಿ ಕ್ಲಬ್ ಆಶ್ರಯದಲ್ಲಿ ಜರುಗಿದ ಕ್ವಾಟ್ರಿಕ್ಸ್-2k24 ಐಟಿ ಫೆಸ್ಟ್ ನ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನವನ್ನು ವಿತರಿಸಿ ಮಾತನಾಡುತ್ತಾ, ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಉಂಟುಮಾಡುತ್ತದೆ. ಈ ಮೂಲಕ ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್, ಐಟಿ ಕ್ಲಬ್ ನ ಅಧ್ಯಕ್ಷ ಪವನ್ ರಾಜ್ ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಸ್ವಾಗತಿಸಿದರು. ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಸುಧೀರ್ ಕೆಎನ್ ಧನ್ಯವಾದ ಅರ್ಪಿಸಿದರು. ಕುಮಾರಿ ಅನುಕ್ಷಾ ಹಾಗೂ ಉಜ್ವಲ್ ಕಾರ್ಯಕ್ರಮ ನಿರೂಪಿಸಿದರು.
ಸುದರ್ಶನ್ ನಾಯಕನಾಗಿದ್ದ Fast X ತಂಡವು ಪ್ರಥಮ ಸಮಗ್ರ ಪ್ರಶಸ್ತಿಯನ್ನು ಮತ್ತು ಸ್ವರ ನಾಯಕಿಯಾಗಿರುವ Bright Bytes ತಂಡವು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.