Fri. Apr 11th, 2025

Chikkaballapur: ನಾಗರ ಪಂಚಮಿ‌ ಹಿನ್ನೆಲೆ ಇಶಾಫೌಂಡೇಶನ್ ಗೆ ಭೇಟಿ ನೀಡಿ, ನಾಗದೇವರಿಗೆ ಪೂಜೆ ಸಲ್ಲಿಸಿದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ

ಚಿಕ್ಕಬಳ್ಳಾಪುರ:(ಆ.9) ನಾಡಿನೆಲ್ಲೆಡೆ ಇಂದು ನಾಗರ ಪಂಚಮಿ‌ ಹಿನ್ನೆಲೆ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಚಿಕ್ಕಬಳ್ಳಾಪುರದ ಪ್ರಸಿದ್ಧ ಇಶಾ ಫೌಂಡೇಶನ್ ಗೆ ಭೇಟಿ ನೀಡಿದರು.

ಇದನ್ನೂ ಓದಿ: 🔶ತೆಂಕಕಾರಂದೂರು: ತೆಂಕಕಾರಂದೂರು ದೇವಸ್ಥಾನದ ನಾಗಬನದಲ್ಲಿ ನಾಗದೇವರಿಗೆ ಪಂಚಾಮೃತ ಅಭಿಷೇಕ, ಮಹಾಪೂಜೆ

ಇಶಾ ಫೌಂಡೇಶನ್ ನಲ್ಲಿ ಬೆಳಗ್ಗೆಯಿಂದ ಹೋಮ ಹವನಗಳು ನಡೆಯುತ್ತಿವೆ. ನಾಗ ದೇವರಿಗೆ ನಟಿ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸಿ ಮಾತನಾಡಿದ ಶ್ರೀನಿಧಿ ಶೆಟ್ಟಿ , ನಮ್ಮ‌ ಮನೆಯಲ್ಲಿ ಏನೇ ಪೂಜೆ ಮಾಡಿದರೂ ನಾಗ ದೇವರಿಗೆ ಮೊದಲ ಪೂಜೆ. ಬೆಣ್ಣೆ ಸೇವೆ ಮಾಡುವ ಹರಕೆಯಿತ್ತು, ಅದನ್ನು ಇವತ್ತು ತಂದೆ ಜೊತೆ ಬಂದು ತೀರಿಸಿದೆ. ನಾನು ಮೊದಲು ನಾಗ ಪ್ರತಿಷ್ಠಾಪನೆಗೂ ಬಂದಿದ್ದೆ, ಮನೆಗೆ ಹೋಗಲು ಆಗಲಿಲ್ಲ ಹಾಗಾಗಿ ಇಲ್ಲಿ ಆಚರಣೆ ಮಾಡಿದೆ, ಜನರನ್ನು ನೋಡಿ ಬಹಳ ಸಂತೋಷವಾಯಿತು ಎಂದು ಹೇಳಿದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು