ಮೇಷ ರಾಶಿ: ತಂದೆಯಿಂದ ನಿಮಗೆ ಆರ್ಥಿಕ ಸಹಾಯವಾಗಲಿದೆ. ಇಂದು ನೀವು ಮಾಡಿದ ಹೂಡಿಕೆಯಿಂದ ಲಾಭವಿದೆ. ದುರಾಭ್ಯಾಸದಿಂದ ಹಣವನ್ನು ಕಳೆದುಕೊಳ್ಳುವಿರಿ. ವ್ಯಾಪಾರದಲ್ಲಿ ಲಾಭವಾಗಲಿದೆ. ಅಪರಿಚಿತರ ಜೊತೆ ಮಾತನಾಡಲು ನಿಮಗೆ ಮುಜುಗರವಾದೀತು. ನಿಮ್ಮ ಉದ್ಯೋಗಕ್ಕೆ ಕೆಲವು ಅಡೆತಡೆಗಳು ಬಂದರೂ ಅದನ್ನು ಸರಿಮಾಡಿಕೊಳ್ಳುವ ಬಗ್ಗೆ ಅರಿವಿರಲಿದೆ.
ವೃಷಭ ರಾಶಿ: ನಿಮಗೆ ಬೇಕಾದಷ್ಟು ಸೌಲಭ್ಯಗಳಿದ್ದರೂ ಕೊರತೆ ಎನಿಸಬಹುದು. ಇಂದು ನೀವು ಒತ್ತಡಗಳಿಗೆ ಸಿಲುಕದೇ ಎಚ್ಚರಿಕೆಯಿಂದ ಕಾರ್ಯವನ್ನು ನಿಭಾಯಿಸಲು ಕಲಿಯಬೇಕಾಗಬಹುದು. ಸಮಯವನ್ನು ವ್ಯರ್ಥವಾಗಿ ಮಾಡಿಕೊಳ್ಳಲು ಅನೇಕ ಮಾರ್ಗಗಳು ತೆರೆದುಕೊಳ್ಳಬಹುದು. ನಿಮ್ಮವರ ಮಾತಿನಿಂದ ಅಪಮಾನವೆನಿಸಬಹುದು.
ಮಿಥುನ ರಾಶಿ: ಪ್ರಭಾವಿಗಳ ಜೊತೆ ನೀವು ಪ್ರಯಾಣ ಮಾಡುವಿರಿ. ಇಂದು ನಿಮ್ಮ ವಾಹನದಲ್ಲಿ ದೀರ್ಘಪ್ರಯಾಣವು ಮಾಡುವುದು ಬೇಡ. ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ನಿಮಗೆ ಹೇಳಬೇಕಾದ ವಿಷಯವನ್ನು ನೇರವಾಗಿ ಹೇಳಲು ಕಷ್ಟವಾದೀತು. ಆಹಾರದ ಬಗ್ಗೆ ಗಮನವಿರಬೇಕು.
ಕರ್ಕಾಟಕ ರಾಶಿ: ಅಧಿಕಾರಕ್ಕೆ ನೀವು ಬಹಳ ಶ್ರಮಪಡುವಿರಿ. ಅಹಂಕಾರದಿಂದ ಕೆಲವರನ್ನು ಕಳೆದುಕೊಳ್ಳುವಿರಿ. ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಸ್ವತಂತ್ರವಾಗಿರುವ ನಿಮಗೆ ಏನನ್ನೋ ಕಳೆದುಕೊಂಡಿದ್ದೀರಿ ಎಂದು ಅನ್ನಿಸಬಹುದು. ಅನುಮಾನವು ನಿಮ್ಮ ನೆಮ್ಮದಿಗೆ ಭಂಗ ತರುವುದು. ಮಕ್ಕಳು ನಿಮ್ಮನ್ನು ಅನೇಕ ಪ್ರಕಾರವಾಗಿ ಪೀಡಿಸಿಯಾರು. ದಾಂಪತ್ಯದಲ್ಲಿ ಬಿರುಕು ಬರುವ ಸಾಧ್ಯತೆ ಇದೆ.
ಸಿಂಹ ರಾಶಿ: ಬಹು ದಿನಗಳ ವಿವಾಹದ ಚಿಂತೆಯು ನಿಮ್ಮಿಂದ ದೂರಾಗುವುದು. ಇಂದು ಕುಟುಂಬದ ಸದಸ್ಯ ನಿಮ್ಮ ಜೊತೆ ಸಮಯವನ್ನು ಕಳೆಯಲು ಒತ್ತಾಯಿಸಬಹುದು. ನಿಮ್ಮ ಯೋಜನೆಯನ್ನು ಮುಂದುವರಿಸಲು ನಿಮಗೆ ಆತಂಕವು ಬರಬಹುದು. ಮುಖ್ಯ ವಿಚಾರವನ್ನು ನೀವು ಮರೆಯುವ ಸಂಭವವಿದೆ. ನೀವೇ ಇಂದು ಸಂಗಾತಿಯನ್ನು ಆರಿಸಿಕೊಳ್ಳಲು ಮುಂದಾಗುವಿರಿ.
ಕನ್ಯಾ ರಾಶಿ: ಇಂದು ನಿಮ್ಮ ನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹೋದ್ಯೋಗಿಗಳ ಸಹಾಯ ಪಡೆಯುವಿರಿ. ಭೂ ವಿವಾದವು ಇತ್ಯರ್ಥವಾಗಬಹುದು.
ತುಲಾ ರಾಶಿ: ತುರ್ತಾಗಿ ಸ್ಥಳ ಬದಲಾವಣೆ ಮಾಡಬೇಕಾಗಬಹುದು. ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿರುವ ನಿಮಗೆ ಪ್ರೇಮ ಜೀವನವು ಒಳ್ಳೆಯ ತಿರುವು ಕೊಡಬಹುದು. ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ನಿಮ್ಮ ಸ್ವಭಾವಕ್ಕೆ ಹೊಂದಿಕೆಯಾಗುವ ಸಂಗಾತಿಯು ಸಿಗುವರು. ನಿಮ್ಮ ಸಮಯಕ್ಕೆ ಯೋಗ್ಯವಾದ ವಸ್ತುವೊಂದು ಬರಲಿದೆ.
ವೃಶ್ಚಿಕ ರಾಶಿ: ಇಂದು ನೀವು ಮಾಡುವ ಕಾರ್ಯದಲ್ಲಿ ವಿಳಂಬವು ಕಾಣಿಸುವುದು. ಒತ್ತಡದಿಂದ ವೇಗವನ್ನು ಹೆಚ್ಚಿಸುವಿರಿ. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ನಿಮಗೆ ನಿಮ್ಮ ಸಾಮರ್ಥ್ಯ ಗೊತ್ತಿದ್ದರೂ ಹಿಂದೆಟು ಹಾಕಬಹುದು. ಸ್ನೇಹಿತರ ಕಾರಣದಿಂದ ಮನೆಯಲ್ಲಿ ಕಲಹಗಳು ಉಂಟಾಗಬಹುದು.
ಧನು ರಾಶಿ: ದಾಂಪತ್ಯದಲ್ಲಿ ನಂಬಿಕೆ ದೂರಾಗಬಹುದು. ಇಂದು ನೀವು ಉದ್ಯಮದ ಕಾರಣಕ್ಕೆ ಕೈಗೊಂಡ ಪ್ರಯಾಣವು ಪ್ರಯೋಜನಕಾರಿಯಾಗಲಿದೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಅಧಿಕೃತ ಕೆಲಸವನ್ನು ಬಿಟ್ಟು ಅನ್ಯ ಕೆಲಸವನ್ನು ಮಾಡಬೇಕಾಗಬಹುದು. ಮಾತನಾಡುವಾಗ ಭೀತಿ ಕಾಣಿಸುವುದು.
ಮಕರ ರಾಶಿ: ಮಂಗಳ ಕಾರ್ಯದಲ್ಲಿ ನಿಮಗೆ ಆಸಕ್ತಿ ಬರುವುದು. ಇಂದು ನೀವು ಜಾಗರೂಕತೆಯಿಂದ ಆಯೋಜಿಸಿ ಕಾರ್ಯವನ್ನು ಸಾಧಿಸಿ. ನಿಮ್ಮ ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ. ಕಛೇರಿಯಲ್ಲಿ ಅಧಿಕಾರಿಯ ಜೊತೆ ವಾದಕ್ಕೆ ಇಳಿಯಬಹುದು. ವೈವಾಹಿಕ ಕಾರ್ಯದಲ್ಲಿ ನಿಮಗೆ ಬಂಧುಗಳ ಸಹಕಾರ ಕಾಣಿಸುವುದು.
ಕುಂಭ ರಾಶಿ: ನಿಮಗೆ ಇಂದು ದೇಹಾರೋಗ್ಯವು ಕ್ಷೀಣಿಸಿದಂತೆ ಭಾಸವಾಗುವುದು. ನೀವು ಸಂಗಾತಿಯ ಜೊತೆ ಸಂತೋಷವನ್ನು ಹಂಚಿಕೊಳ್ಳುವಿರಿ. ತಾವು ಉಳಿದುಕೊಳ್ಳಲು ಯಾರ ಮೇಲೂ ಅನಗತ್ಯ ಆರೋಪ ಮಾಡಿಯಾರು. ಸ್ನೇಹಿತರು ಸ್ವಾರ್ಥಕ್ಕಾಗಿ ನಿಮಗೆ ಬೇಡದ್ದನ್ನು ಮಾಡಬಹುದು. ಉತ್ಸಾಹವು ಎಷ್ಟೇ ಇದ್ದರೂ ಶಾಂತವಾದ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಮೀನ ರಾಶಿ: ರಾಜಕೀಯ ಕ್ಷೇತ್ರದಲ್ಲಿ ಕಾದಾಟ, ವಾಗ್ವಾದಗಳು ಅಧಿಕವಾಗಿ ಇರಲಿವೆ. ನಿಮ್ಮ ಒರಟುತನದಿಂದ ದಾಂಪತ್ಯದಲ್ಲಿ ಕಲಹವಾಗುವ ಸಾಧ್ಯತೆ ಇದೆ. ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ವಿದ್ಯಾಭ್ಯಾಸದಲ್ಲಿ ನೂರಕ್ಕೆ ನೂರು ಇದ್ದರೂ ಫಲಿತಾಂಶವು ಕೈಕೊಡಬಹುದು. ಮಕ್ಕಳು ಸೋಮಾರಿಗಳಾಗದಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ.