ಉಜಿರೆ:(ಆ.9) ಅನುಗ್ರಹ ಸಭಾಭವನದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಫಾ! ವಿಜಯ್ ಲೋಬೊ ರವರ ಗೌರವ ಉಪಸ್ಥಿತಿಯಲ್ಲಿ ಶಿಕ್ಷಕ- ರಕ್ಷಕ ಸಂಘದ ಕಾರ್ಯಕಾರಿ ಸಭೆಯನ್ನು ಆ.8 ರಂದು ನಡೆಸಲಾಯಿತು.
ಇದನ್ನೂ ಓದಿ: 🐟ಬೆಳ್ತಂಗಡಿ: (ಆ.10 – ಆ.12) ಮೊಗ್ರು ಗ್ರಾಮದ ಕಡಮ್ಮಾಜೆ ಫಾರ್ಮ್ಸ್ ನಲ್ಲಿ “ಮೀನು ಮೇಳ”
ಈ ಸಭೆಯಲ್ಲಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯ ಪೋಷಕರಾದ ಶ್ರೀಯುತ ಉಮೇಶ್ ಶೆಟ್ಟಿ ಇವರನ್ನು ಉಪಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಶ್ರೀಯುತ ಉಮೇಶ್ ಶೆಟ್ಟಿ ಇವರು ಶ್ರೀ ದುರ್ಗಾ ವುಡ್ ಇಂಡಸ್ಟ್ರಿಸ್ ಮತ್ತು ಫರ್ನೀಚರ್ಸ್ ಮಡಂತ್ಯಾರ್ ಮತ್ತು ಉಜಿರೆ ಇದರ ಮಾಲಕರಾಗಿದ್ದು, ಇವರು ರೋಟರಿ ಕ್ಲಬ್, ಮಡಂತ್ಯಾರ್ ಇದರ ಕಾರ್ಯದರ್ಶಿಯಾಗಿದ್ದು, ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ 2023-24ನೇ ಸಾಲಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಇನ್ನಿತರ ಹಲವಾರು ಸೇವಾ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ.