Mon. Jan 12th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Daily Horoscope: ಇಂದು ಈ ರಾಶಿಯವರಿಗೆ ಹಿತ ಶತ್ರುಗಳಿಂದ ತೊಂದರೆ ಇರಲಿದೆ..!!

Daily Horoscope - ಇಂದು ಈ ರಾಶಿಯವರಿಗೆ ಕಚೇರಿಯಲ್ಲಿ ಕೆಲಸದ ಒತ್ತಡ ಅಧಿಕವಾಗಲಿದೆ.

ಮೇಷ ರಾಶಿ: ಅವಸರದಿಂದ ಇಂದಿನ ಕಾರ್ಯಗಳನ್ನು ಮಾಡಬೇಕಾಗಬಹುದು. ಆದಾಯಕ್ಕೆ ಯೋಗ್ಯವಾದ ಕೃಷಿ ಚಟುವಟಿಕೆಯಲ್ಲಿ ನಿಮ್ಮದೇ ಆದ ಹೆಜ್ಜೆಗಳನ್ನು ಇಡುವಿರಿ‌. ನೀವು ಆಸ್ತಿಗೆ ಸಂಬಂಧಿಸಿದ ವಿವಾದವು ಇನ್ನೊಂದು ತಿರುವನ್ನು ಪಡೆಯಬಹುದು. ವಿದೇಶೀ ವಸ್ತುಗಳ ಮೇಲೆ ವ್ಯಾಮೋಹ ಬರಬಹುದು.

ವೃಷಭ ರಾಶಿ: ಅಪರಿಚಿತರಿಂದ ಹಣಕ್ಕಾಗಿ ಒತ್ತಡ ಬರಬಹುದು. ನಿಮ್ಮವರ ಬಗ್ಗೆ ನಿಮಗೆ ಬಹಳ ಕಾಳಜಿ ಇರಲಿದೆ. ನಿಮಗೆ ಉಂಟಾದ ತೊಂದರೆಯನ್ನು ಮರೆತು ನೀವು ಮೊದಲಿನಂತೆ ಆಗುವಿರಿ. ವಿದ್ಯಾಭ್ಯಾಸಕ್ಕೆ ಬೇಕಾದ ವಾತಾವರಣ ಸಿಗದೇ ಕಷ್ಟವಾದೀತು. ಮನೆಗೆ ಅವಶ್ಯಕವಿರುವ ವಸ್ತುಗಳನ್ನು ನೀವು ಖರೀದಿಸುವಿರಿ. ಧನನಷ್ಟವೆಂಬ ಭಾವವೂ ನಿಮ್ಮೊಳಗೆ ಅವ್ಯಕ್ತವಾಗಿ ಇರಲಿದೆ.

ಮಿಥುನ ರಾಶಿ: ನಿಮ್ಮ ಒರಟು ಸ್ವಭಾವದಿಂದ ಎಲ್ಲರಿಂದ ದೂರಾಗುವಿರಿ. ಯಾರಾದರೂ ಆಮಿಷವನ್ನು ತೋರಿಸಿ ಕೆಲಸವನ್ನು ಮಾಡಿಸಿಕೊಳ್ಳಬಹುದು. ಭವಿಷ್ಯದ ಬಗ್ಗೆ ನಿಮಗೆ ಸರಿಯಾದ ಕಲ್ಪನೆ ಸಿಗದೇಹೋಗಬಹುದು. ನಿಮ್ಮ ಇಚ್ಛಾಶಕ್ತಿಯಿಂದ ಬೇಕಾದುದನ್ನು ನೀವು ಪಡೆದುಕೊಳ್ಳುವಿರಿ. ಒತ್ತಾಯಕ್ಕೆ ಮಣಿದು ನಿಮ್ಮ ಕೆಲಸವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ: ಉದ್ಯೋಗಿಗಳಿಗೆ ಬೇಡಿಕೆಗ ತಕ್ಕ ಪೂರೈಕೆ ಕಷ್ಟವಾದೀತು. ನಿಮ್ಮ ವರ್ತನೆಯಿಂದ ಅಧಿಕಾರವು ತಪ್ಪಬಹುದು. ಆಸ್ತಿಯ ಬಗ್ಗೆ ಸರಿಯಾದ ದಾಖಲೆಗಳು ಇರಲಿ. ವಿಶ್ರಾಂತಿ ಇಲ್ಲದೇ ಮಾಡುವ ಕೆಲಸವು ನಿಮಗೆ ಆಯಾಸವನ್ನು ತಂದುಕೊಟ್ಟೀತು. ಹಿತಶತ್ರುಗಳ ತೊಂದರೆಯು ಅಧಿಕವಾಗಿ ಇರಲಿದೆ.

ಸಿಂಹ ರಾಶಿ: ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಆಲೋಚಿಸಿ. ಸಂಬಂಧದಿಂದ ಭೂಮಿಯ ಲಾಭವು ಆಗುವುದಾದರೂ ಅದನ್ನು ಪರಿಶೀಲಿಸಿ ಒಪ್ಪಿಕೊಳ್ಳಿ. ಬೆಳಗ್ಗೆ ನಿಮಗೆ ಆತ್ಮವಿಶ್ವಾಸವೇ ಇಡೀ ದಿನದ ಕೆಲಸವನ್ನು ಸುಲಲಿತವಾಗಿ ಮುಗಿಸಿಕೊಡುವುದು. ನಿಮ್ಮ ನಿರ್ಧಾರವನ್ನು ಸುಲಭಕ್ಕೆ ಬದಲಿಸುವುದು ಬೇಡ.

ಕನ್ಯಾ ರಾಶಿ: ಮಹಿಳಾ ಕಲಾವಿದರಿಗೆ ಪ್ರಶಂಸೆ ಇರಲಿದೆ. ಇಂದು ನಿಮಗೆ ಯಾರಿಂದಲಾದರೂ ಯೋಗ್ಯ ಸಂಗಾತಿಯ ಮಾಹಿತಿಗಳು ಸಿಗುವುದು. ಕುರುಡು ತನದಿಂದ ಎಲ್ಲಿಯೋ ಹೂಡಿಕೆ ಮಾಡುವುದನ್ನು ತಪ್ಪಿಸಿ. ಸ್ಫೂರ್ತಿದಾಯಕ ಸಂಗತಿಗಳು ನಿಮ್ಮನ್ನು ಇನ್ನಷ್ಟು ಬಲಗೊಳಿಸುವುವು. ಇಂದಿನ ಸಮಯವನ್ನು ಸುಮ್ಮನೇ ವ್ಯರ್ಥವಾಗಿ ಕಳೆಯುವಿರಿ.

ತುಲಾ ರಾಶಿ: ಹಿರಿಯರ ಮಾತನ್ನು ಕೇಳಿ, ತೊಂದರೆಯನ್ನು ತಪ್ಪಿಸಿಕೊಳ್ಳುವಿರಿ. ನೀವು ಹಣ ಸಂಪಾದನೆಗೆ ಆರಿಸಿಕೊಂಡ‌ ಮಾರ್ಗವು ಸರಿಯೆನಿಸದೇ ಇರಬಹುದು. ಅಪಮಾನವನ್ನು ಸಹಿಸಿಕೊಳ್ಳಲು ನಿಮಗೆ ಕಷ್ಟವಾದೀತು. ವಾಹನವನ್ನು ಎಚ್ಚರಿಕೆಯಿಂದ ಚಲಾಯಿಸಿ.

ವೃಶ್ಚಿಕ ರಾಶಿ: ಇಂದು ಹಿತಶತ್ರುಗಳಿಂದ ಧನವು ನಷ್ಟವಾಗಲಿದೆ. ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಬಗ್ಗೆ ಆಪ್ತರ ಸಲಹೆ ಅವಶ್ಯಕ. ಹೂಡಿಕೆಯ ಮೇಲೆ ನಿಮಗೆ ಪೂರ್ಣ ವಿಶ್ವಾಸ ಬರಬಹುದು. ಹೊಸತನವನ್ನು ನೀವು ರೂಡಿಸಿಕೊಳ್ಳುವ ಹಂಬಲವನ್ನು ಆಪ್ತರ‌ ಜೊತೆ ಹಂಚಿಕೊಳ್ಳುವಿರಿ. ಕೇಳಿದವರಿಗೆ ಹಣವನ್ನು ನೀಡುವಿರಿ.

ಧನು ರಾಶಿ: ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ನೀವು ಪರರ ತಪ್ಪಿನಿಂದ ಕಲಿಯುವುದು ಉತ್ತಮ. ಮನೆಯ ಕಾರಣಕ್ಕೆ ಉದ್ಯೋಗದ ಕಿರಿಕಿರಿಯು ನಿಮ್ಮನ್ನು ಬಾಧಿಸದೇ ಇರದು. ನಿಮ್ಮನ್ನು ದ್ವೇಷಿಸಲು ಕಾರಣವಿಲ್ಲದಿದ್ದರೂ ದ್ವೇಷಿಸುವರು. ಕರ್ತವ್ಯದಲ್ಲಿ ಲೋಪವಾಗುವ ಸಾಧ್ಯತೆ ಇದೆ.

ಮಕರ ರಾಶಿ: ಇಂದಿನ ವಿಫಲತೆಯು ನಿಮಗೆ ಛಲವನ್ನು ತರಬಹುದು. ಇಂದು ನಿಮ್ಮ ಹಳೆಯ ದಾಯಾದಿ ಕಲಹವು ಪುನಃ ಆರಂಭವಾಗಬಹುದು. ಆಕಸ್ಮಿಕ ಧನಲಾಭ ಹಾಗೂ ಖರ್ಚುಗಳು ಒಟ್ಟಿಗೇ ಆಗಲಿವೆ. ಸಹೋದರರಿಂದ‌ ನಿಮಗೆ ಬೇಕಾದ ಸಂಪತ್ತು ಸಿಗಲಿದೆ. ಸಮಯಕ್ಕೆ ಬೆಲೆ ಕೊಡಬೇಕಾದೀತು.

ಕುಂಭ ರಾಶಿ: ನಿಮ್ಮ ವ್ಯಾಪಾರದಲ್ಲಿ ಲಾಭವು ಕಡಿಮೆ ಕಾಣಿಸುವುದು. ನೀವು ಇಂದು ಅಧಿಕಾರಗಳ ಜೊತೆ ವಾಗ್ವಾದ ಮಾಡುವಿರಿ. ಇಂದಿನ ಹಣಕಾಸಿನ‌ ಬಿಕ್ಕಟ್ಟು ಮನಸ್ಸಿನ ವೇಗವನ್ನು ಹೆಚ್ಚಿಸುವುದು. ಕಡಿಮೆ ಶ್ರಮದಿಂದ ಹೆಚ್ಚು ಗಳಿಸುವ ಬಗ್ಗೆ ಚಿಂತಿಸುವಿರಿ. ‌ಯಾರನ್ನೂ ದ್ವೇಷಿಸುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಬೇಡ.‌

ಮೀನ ರಾಶಿ: ಇಂದು ನಿಮಗೆ ಲಾಭ ನಷ್ಟಗಳ ವಿವೇಚನೆ ಅಧಿಕವಾಗಿರುವುದು. ಇಂದು ನೀವೊಬ್ಬರೇ ಯತ್ನಿಸಿದರೂ ಕಾರ್ಯದಲ್ಲಿ ಜಯವು ಸಿಗುವುದು. ಹಿತೈಷಿಗಳ ಬೆಂಬಲವೂ ನಿಮಗೆ ಅತ್ಯವಶ್ಯವಾಗಿ ಬೇಕು. ನಿಮ್ಮ ಜವಾಬ್ದಾರಿಯು ಮುಕ್ತಾಯ ಆಗಬಹುದು. ತಂದೆಯಿಂದ ಸಂಪತ್ತನ್ನು ಅಪೇಕ್ಷಿಸುವಿರಿ. ಸರ್ಕಾರದ ಕಾರ್ಯದಲ್ಲಿ ಅಡೆತಡೆಗಳು ಅಧಿಕವಾಗಿ ಕಾಣಿಸುವುದು.

Leave a Reply

Your email address will not be published. Required fields are marked *