ಆಂಧ್ರ ಪ್ರದೇಶ:(ಆ.11) ಕಳ್ಳ ದೇವಾಲಯಕ್ಕೆ ಬಂದು ಅಮ್ಮಾ ನೀನೇ ನನ್ನನ್ನು ಕಾಪಾಡ್ಬೇಕು ಎಂದು ಭಕ್ತಿಯಿಂದ ಕೈ ಮುಗಿದು ದೇವಿ ವಿಗ್ರಹದ ಚಿನ್ನವನ್ನೇ ಎಗರಿಸಿದ ಘಟನೆ ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆ, ಇಲ್ಲಿನ ಮದನಹಳ್ಳಿ ಪಟ್ಟಣದ ಬಾಟಗಂಗಮ್ಮ ದೇವಾಲಯದಲ್ಲಿ ನಡೆದಿದೆ.
ಕಳ್ಳನೊಬ್ಬ ಅಮ್ಮನವರ ಚಿನ್ನವನ್ನು ಕದ್ದಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ಸಾಮಾನ್ಯ ಭಕ್ತರಂತೆ ಗರ್ಭಗುಡಿಯ ಒಳಗೆ ಬಂದ ಕಳ್ಳ ಭಕ್ತಿಯಿಂದ ಕೈ ಮುಗಿದು, ದೇವರ ವಿಗ್ರಹದ ಮೇಲಿದ್ದ ಚಿನ್ನದ ಸರವನ್ನು ಎಗರಿಸಿ ಎಸ್ಕೇಪ್ ಆಗಿದ್ದಾನೆ. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.