ಬೆಳ್ತಂಗಡಿ:(ಆ.11) ಪುಂಜಾಲಕಟ್ಟೆಯಿಂದ – ಚಾರ್ಮಾಡಿವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಗೆ ಮುಕ್ತಿ ಸಿಗುವ ಹಂತಕ್ಕೆ ತಲುಪಿದೆ. ಡಿಪಿ ಜೈನ್ ಕಂಪೆನಿಯಿಂದ ಬ್ಯಾಕ್ ಟು ಬ್ಯಾಕ್ ಮಾದರಿಯಲ್ಲಿ ಮುಗ್ರೋಡಿ ಕನ್ಸ್ಟ್ರಕ್ಷನ್ ರವರಿಗೆ ಸಬ್ ಕಾಂಟ್ರಾಕ್ಟ್ ನೀಡಲಾಗಿದ್ದು, ಕಾಶಿಬೆಟ್ಟುವಿನಲ್ಲಿ ಕೆಲಸಕ್ಕೆ ಚಾಲನೆ ನೀಡಲಾಯಿತು. ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಸದ ಬ್ರಿಜೇಶ್ ಚೌಟ ರು ” ದಕ್ಷಿಣ ಕನ್ನಡ ವಾತಾವರಣದ ಬಗ್ಗೆ ಡಿಪಿ ಜೈನ್ ಕಂಪೆನಿಯವರಿಗೆ ಅರಿವಿಲ್ಲ” ಇದೊಂದು ಅಂತರಾಷ್ಟ್ರೀಯ ಟೆಂಡರ್. ಈ ಸಮಸ್ಯೆಯ ಬಗ್ಗೆ ಹಲವು ಮೀಟಿಂಗ್ ಮಾಡಿ, ಡಿಪಿ ಜೈನ್ ಪ್ರಮುಖರು ಮತ್ತು ಮುಗ್ರೋಡಿ ಕನ್ಸ್ಟ್ರಕ್ಷನ್ ರವರನ್ನು ಕರೆಸಿ ಮಾತನಾಡಿಸಲಾಯಿತು.
ಇದನ್ನೂ ಓದಿ: 🔴U PLUS TV IMPACT: ಪುಂಜಾಲಕಟ್ಟೆ – ಚಾರ್ಮಾಡಿ ರಾ.ಹೆ. ಕಾಮಗಾರಿ ಆರಂಭ
ಈಗ ಒಪ್ಪಂದ ಪ್ರಕಾರ ಇಂದಿನಿಂದಲೇ ಮುಗ್ರೋಡಿಯವರು ಕೆಲಸ ಆರಂಭಿಸಲಿದ್ದಾರೆ. ಅಲ್ಲದೇ, ಮುಂದಿನ ಒಂದು ತಿಂಗಳಲ್ಲಿ ಜನರಿಗಾಗುತ್ತಿರುವ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ. ಇದೇ 13 ರಂದು ನಿತಿನ್ ಗಡ್ಕರಿಯವರೊಂದಿಗೆ ರಿವ್ಯೂ ಮೀಟಿಂಗ್ ಇದೆ. ಅಲ್ಲೂ ಈ ರಸ್ತೆಯ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ನಮ್ಮ ನಿರ್ಧಾರದ ಪ್ರಕಾರ ಮುಂದಿನ ಒಂದು ತಿಂಗಳೊಳಗೆ ಒಂದು ಹಂತಕ್ಕೆ ವಾಹನ ಓಡಾಡುವಂತೆ ಮಾಡಬೇಕು. ನಂತರ ಟೈಮ್ ಲೈನ್ ಹಾಕಿಕೊಂಡು ಕೆಲಸ ಪೂರ್ಣಗೊಳಿಸಲು ಮುಂದಾಗ್ತೇವೆ ಎಂದು ಹೇಳಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ “ಡಿ ಪಿ ಜೈನ್ ನಾಗ್ಪುರದ ಕಂಪೆನಿ. ದಕ್ಷಿಣಕನ್ನಡದಲ್ಲಿ ಕೆಲಸ ಮಾಡಲು ನಾಲ್ಕು ತಿಂಗಳು ಮಾತ್ರ ಸಾಧ್ಯವಾಗುತ್ತೆ. ಡಿಪಿ ಜೈನ್ ಅಸಮರ್ಪಕ ಕೆಲಸದಿಂದ ವಾಹನ ಸಂಚಾರಕ್ಕೆ ಅಲ್ಪ ತೊಂದರೆಗಳಾಗಿವೆ. ಎರಡು ವರ್ಷದೊಳಗೆ ಹೈವೇ ಕಾಮಗಾರಿ ಮುಗಿದ ನಂತರ ಅನುಕೂಲವಾಗುತ್ತೆ, ಪ್ರವಾಸೋದ್ಯಮಕ್ಕೂ ನೆರವಾಗುತ್ತೆ. ಈಗ ಜನರನ್ನು ಉದ್ರೇಕಗೊಳಿಸುವ ಯಾರೂ ಮಾಡಿದ್ರೂ ಅದು ತಾತ್ಕಾಲಿಕ” ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸದ ಶಾಸಕರ ಜೊತೆ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಜಯಾನಂದ ಗೌಡ ಉಪಸ್ಥಿತರಿದ್ದರು.