Mon. Apr 14th, 2025

Belthangadi: ರಸ್ತೆಗೆ ಅಡ್ಡಲಾಗಿ ಇಟ್ಟ ಕಾರು- ಮಹಿಳೆಯಿಂದ ಕಾರು ಮಾಲೀಕನಿಗೆ ಹಿಗ್ಗಾಮುಗ್ಗಾ ಕ್ಲಾಸ್

ಬೆಳ್ತಂಗಡಿ :(ಆ.11) ರಸ್ತೆಗೆ ಅಡ್ಡಲಾಗಿ ಎರಡು ಗಂಟೆಗೂ ಅಧಿಕ ಸಮಯ ಕಾರು ನಿಲ್ಲಿಸಿ ಹೋಗಿದ್ದ ಮಾಲೀಕ ಜಿಲ್ಲಾ ಕಿಸನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೋಹನ್ ಕಲ್ಮಂಜ ಎಂಬಾತನಿಗೆ ಸಂಚಾರಿ ಪೊಲೀಸರ ಮುಂದೆಯೇ ಮಹಿಳೆ ಹಾಗೂ ಸಾರ್ವಜನಿಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ಆ.11 ರಂದು ಬೆಳ್ತಂಗಡಿಯಲ್ಲಿ ನಡೆದಿದೆ.

ಇದನ್ನೂ ಓದಿ: 💥”Daskat” Tulu movie: “ದಸ್ಕತ್” ತುಳು ಚಲನಚಿತ್ರದ ಪೋಸ್ಟರ್ ಬಿಡುಗಡೆ

ಬೆಳ್ತಂಗಡಿ ಶ್ರೀ ಗುರುದೇವ ಬ್ಯಾಂಕ್ ನ ಶಾಖಾ ಕಚೇರಿಗೆ ಹಾಗೂ ಖಾಸಗಿ ಮನೆಗೆ ಹೋಗುವ ರಸ್ತೆಗೆ ಅಡ್ಡಲಾಗಿ ಆ.11 ರಂದು 12:30 ಕ್ಕೆ ಕೀಯಾ ಕಂಪನಿಯ KA-70-M-4209 ಸಂಖ್ಯೆಯ ಕಾರನ್ನು ಮಾಲೀಕ ಮೋಹನ್ ಕಲ್ಮಂಜ ಎಂಬಾತ ಇಟ್ಟು ಬೇರೆಡೆ ಹೋಗಿದ್ದು, ಎಷ್ಟೇ ಕರೆ ಮಾಡಿ ತಿಳಿಸಿದರೂ ಕ್ಯಾರೆ ಮಾಡಿರಲಿಲ್ಲ. ಬ್ಯಾಂಕ್ ಸಭೆಗೆ ಬರಬೇಕಾದ ಸದಸ್ಯರ ಕಾರು ಒಳಪ್ರವೇಶ ಮಾಡಲು ಸಾಧ್ಯವಾಗಿರಲ್ಲಿಲ್ಲ, ಪಕ್ಕದ ಖಾಸಗಿ ಮನೆಯ ಮಾಲಕಿ ವಯಸ್ಸಾದ ತಾಯಿ ಜೊತೆ ಬೆಂಗಳೂರಿಗೆ ಹೋಗಲು ರಸ್ತೆ ಕಡೆ ಬರುವಾಗ ಕೂಡ ಕಾರು ಮಾಲೀಕ ಒಂದು ಗಂಟೆಯಾದರೂ ಬಂದೇ ಇಲ್ಲ, ಕೊನೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರನ್ನು ಕರೆಸಲಾಯಿತು.

ಖಾಸಗಿ ಮನೆಯ ಮಹಿಳೆ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಕಾರು ಮಾಲೀಕ ಮೋಹನ್ ಕಲ್ಮಂಜ ನಿಗೆ ಕರೆ ಮಾಡಿ ತಕ್ಷಣ ಬರಲು ತಿಳಿಸಿದರೂ ತಡವಾಗಿ 2:30 ಕ್ಕೆ ಮಾಲೀಕ ಆಗಮಿಸಿದ್ದಾನೆ.

ಈ ವೇಳೆ ಪೊಲೀಸರ ಮುಂದೆಯೇ ಮಹಿಳೆ ಹಾಗೂ ಸಾರ್ವಜನಿಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು. ಈ ವೇಳೆ ಕಾರು ಮಾಲೀಕ ಮೋಹನ್ ಕಲ್ಮಂಜ ಮಹಿಳೆಗೆ ಸಾರ್ವಜನಿಕರ ಮುಂದೆ ಕ್ಷಮೆ ಕೇಳಿದ್ದಾನೆ. ಬಳಿಕ ಸಂಚಾರಿ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದು. ಪೊಲೀಸರು ಕಾರಿನ ಮೇಲೆ ಮಾಲೀಕ ಮೋಹನ್ ಕಲ್ಮಂಜನಿಗೆ ದಂಡ ವಿಧಿಸಿದ್ದಾರೆ.

Leave a Reply

Your email address will not be published. Required fields are marked *