Wed. Nov 20th, 2024

Bengaluru: ದಾಂಪತ್ಯ ಜೀವನಕ್ಕೆ ಕಾಲಿಟ್ಟ ತರುಣ್-ಸೋನಲ್

ಬೆಂಗಳೂರು:(ಆ.11)ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಸಂಪ್ರದಾಯದಂತೆ ಇವರಿಬ್ಬರ ವಿವಾಹ ನೆರವೇರಿದೆ. ಶುಭ ಮುಹೂರ್ತದಲ್ಲಿ ಕುಟುಂಬದವರು, ಬಂಧುಗಳು, ಗುರು-ಹಿರಿಯರ ಸಮ್ಮುಖದಲ್ಲಿ, ಮಂಗಳವಾದ್ಯದ ಮೇಳ, ಮಂತ್ರ ಘೋಷಣೆಗಳ ನಡುವೆ ತರುಣ್ ಅವರು ಸೋನಲ್ ಅವರಿಗೆ ಮಾಂಗಲ್ಯಧಾರಣೆ ಮಾಡಿದರು.

ಇದನ್ನೂ ಓದಿ: 🛑Kolkata: ವೈದ್ಯೆಯ ಅತ್ಯಾಚಾರಗೈದು ಕೊಲೆ ಮಾಡಿರುವ ಆರೋಪಿ ತಗಲಾಕೊಂಡಿದ್ದು ಹೇಗೆ ಗೊತ್ತಾ? ಆರೋಪಿಯ ಸುಳಿವು ನೀಡಿದ ಆ ವಸ್ತು ಯಾವುದು?

ತರುಣ್ ಹಾಗೂ ಸೋನಲ್ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಕಳೆದ ಕೆಲ ತಿಂಗಳಿನಿಂದ ಈಚೆಗೆ ಈ ಇಬ್ಬರ ನಡುವಿನ ಪ್ರೇಮ ಸಂಬಂಧ ಹೊರಬಿದ್ದಿತ್ತು. ಇಬ್ಬರೂ ಸಹ ತಮ್ಮ ಕುಟುಂಬದವರನ್ನು ಒಪ್ಪಿಸಿ ಇದೀಗ ಎಲ್ಲ ಗೆಳೆಯರು, ಆತ್ಮೀಯರನ್ನು ಕರೆದು ಅದ್ಧೂರಿಯಾಗಿ ವಿವಾಹವಾಗುತ್ತಿದ್ದಾರೆ. ಬೆಂಗಳೂರಿನ ಕೆಂಗೆರೆ ಬಳಿ ಇರೋ ಪೂರ್ಣಿಮಾ ಪ್ಯಾಲೇಸ್​ನಲ್ಲಿ ಇವರ ಅದ್ಧೂರಿ ಮದುವೆ ನೆರವೇರಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು