ಪುತ್ತೂರು:(ಆ.11) ವಿದ್ಯಾ ಭಾರತೀಯ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದೃಶನ ಸುರೇಶ್ ಸರಳಿಕಾನ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ; ✍🏻Feature Story: ಮತ್ತೊಮ್ಮೆ ಮಗುವಾಗುವಾಸೆ..!
ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ಸಿಬಿಎಸ್‌ಸಿಯ 8ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ದೃಶನ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಮಾರ್ಷಲ್ ಆರ್ಟ್ಸ್ ಪುತ್ತೂರು ಶಾಖೆಯ ಮುಖ್ಯಶಿಕ್ಷಕ ನಿತಿನ್ ಎನ್ ಸುವರ್ಣರವರ ಮಾರ್ಗದರ್ಶನದಲ್ಲಿ ಶಿಕ್ಷಕ ಶಿವಪ್ರಸಾದ್‌ರವರಲ್ಲಿ ದರ್ಬೆ ಕೈಗಾರಿಕಾ ಭವನದ ಹಾಲ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಇವರು ಬೆಟ್ಟಂಪಾಡಿ ಗ್ರಾಮದ ಸರಳಿಕಾನ ನಿವಾಸಿ ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ ಮತ್ತು ಸ್ತವ್ಯ ಪರಂಪರ ಎಣ್ಣೆ ಗಾಣದ ಸಂಸ್ಥಾಪಕ ಸುರೇಶ್ ದಂಪತಿ ಪುತ್ರಿ.
ಇವರು ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆಯುವ ದಕ್ಷಿಣ ವಲಯ ಮಟ್ಟಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.