ವೇಣೂರು: (ಆ. 11) ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ವೇಣೂರು ಪಿ ಎಂ ಶ್ರೀ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಬಜಿರೆಯಲ್ಲಿ ಆಗಸ್ಟ್ ತಿಂಗಳ ಶ್ರಮದಾನವನ್ನು ನಡೆಸಲಾಯಿತು.
ಶ್ರಮದಾನದಲ್ಲಿ ಶಾಲೆಯ ಸುತ್ತ ಮುತ್ತ ಹಣ್ಣು ಗಿಡ ನಾಟಿ ಮಾಡಲಾಯಿತು. ಕೆಲವು ಗಿಡ ಮರಗಳ ಬುಡಕ್ಕೆ ಸೊಪ್ಪು ಹಾಕುವ ಕೆಲಸ ಮಾಡಲಾಯಿತು. ಈ ಶ್ರಮದಾನದಲ್ಲಿ ಶಾಲೆಯ ಪೋಷಕರು ಮತ್ತು ವಿಪತ್ತು ಸ್ವಯಂ ಸೇವಕರು ಭಾಗವಹಿಸಿದ್ದರು.
ತಾಲೂಕಿನ ಕೃಷಿ ಅಧಿಕಾರಿ ಕೃಷ್ಣ ಹಾಗೂ ವಲಯದ ಮೇಲ್ವಿಚಾರಕಿ ಶ್ರೀಮತಿ ಶಾಲಿನಿ ಉಪಸ್ಥಿತರಿದ್ದರು.
ಶ್ರಮದಾನದಲ್ಲಿ ಭಾಗವಹಿಸಿದ ಸ್ವಯಂ ಸೇವಕರಿಗೆ ಶಾಲೆಯ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಿದರು. ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಶಾಲೆಯ ಕಮಿಟಿ ಅಧ್ಯಕ್ಷರಾದ ದಿನೇಶ್ ಪೂಜಾರಿ ಧನ್ಯವಾದ ಸಲ್ಲಿಸಿದರು.