ಪಾಟ್ನಾ:(ಆ.12) ಹಾವು ಮತ್ತು ಮುಂಗುಸಿಯನ್ನು ಆ ಜನ್ಮದ ಶತ್ರುಗಳೆಂದೇ ಹೇಳಬಹುದು. ಈ ಉಭಯ ಜೀವಿಗಳು ಯಾವುದೇ ಕ್ಷಣದಲ್ಲೂ ಎದುರು ಬದುರಾದರೆ ಅಲ್ಲೊಂದು ಘನಘೋರ ಯುದ್ಧ ನಡೆಯುವುದಂತೂ ಪಕ್ಕ. ಇವುಗಳ ನಡುವಿನ ಕಾಳಗವೇ ಬಲು ರೋಚಕ. ಈ ಪರಮ ಶತ್ರುಗಳ ನಡುವಿನ ರೋಚಕ ಕಾಳಗದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಏರ್‌ಪೋರ್ಟ್‌ನ ರನ್‌ವೇಯಲ್ಲಿಯೇ ಮೂರು ಮುಂಗುಸಿಗಳು ಒಬ್ಬಂಟಿ ಹಾವಿನ ಜೊತೆಗೆ ಕಾಳಗಕ್ಕೆ ಇಳಿದಿವೆ.
ಇದನ್ನೂ ಓದಿ: 🛑ಬಿಹಾರ: ದೇವಸ್ಥಾನದಲ್ಲಿ ಭಾರೀ ಜನದಟ್ಟಣೆ – ಕಾಲ್ತುಳಿತಕ್ಕೆ ಏಳು ಮಂದಿ ಬಲಿ
ಈ ಘಟನೆ ಪಾಟ್ನಾ ಏರ್‌ಪೋರ್ಟ್‌ನಲ್ಲಿ ನಡೆದಿದ್ದು, ಹಾವು ಮತ್ತು ಮುಂಗುಸಿ ಏರ್‌ಪೋರ್ಟ್‌ನ ರನ್‌ವೇಯಲ್ಲಿಯೇ ಕಾದಾಟಕ್ಕೆ ಇಳಿದಿವೆ. ಒಬ್ಬಂಟಿ ಹಾವನ್ನು ಸುತ್ತುವರಿದ ಮೂರು ಮುಂಗುಸಿಗಳು ಏರ್‌ಪೋರ್ಟ್‌ನ ರನ್‌ವೇಯನ್ನು ಯುದ್ಧ ಭೂಮಿಯನ್ನಾಗಿ ಮಾಡಿದೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.