ಬೆಳ್ತಂಗಡಿ:(ಆ.13) ರಕ್ಷಿತ್ ಶಿವರಾಂ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ಸುದ್ದಿಗೋಷ್ಟಿ ಮೂಲಕ ಶಾಸಕ ಹರೀಶ್ ಪೂಂಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಖಾಸುಮ್ಮನೆ ಮಾಧ್ಯಮಗಳ ಮುಂದೆ ಬಂದು ಹೇಳೋದಲ್ಲ ತನ್ನ ಇತಿಹಾಸವನ್ನು ನೋಡಿಕೊಳ್ಳಿ ಎಂದು ಗುಡುಗಿದ್ದಾರೆ.
ಲೋಕಾಯುಕ್ತ ದಾಳಿಯಾದ ಮನೆಯಲ್ಲೇ ರಕ್ಷಿತ್ ಇರುವುದು!
ಭ್ರಷ್ಟಾಚಾರ ಆರೋಪ ಮಾಡುವ ರಕ್ಷಿತ್ ಶಿವರಾಂ ಯಾವುದೇ ನೈತಿಕತೆ ಇಲ್ಲ. ಇಡೀ ಅವರ ಕುಟುಂಬವೇ ಭ್ರಷ್ಟಾಚಾರ ನಡೆಸುತ್ತಿದೆ ಎಂದಿದ್ದಾರೆ. ಭ್ರಷ್ಟಾಚಾರದಿಂದಾಗಿ ಲೋಕಾಯುಕ್ತ ದಾಳಿ ನಡೆದ ಪೀತಾಂಬರ ಹೆರಾಜೆ ಮನೆಯಿಂದಲೇ ರಕ್ಷಿತ್ ಶಿವರಾಂ ದಿನ ನಿತ್ಯ ಬರುತ್ತಿದ್ದಾರೆ. ಮತ್ತೆ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು. ವೇಶ್ಯಾವಾಟಿಕೆ ದಂಧೆಯ ಹಫ್ತಾ ವಸೂಲಿ, ಲಾಡ್ಜ್ ಗಳಿಂದ ಹಫ್ತಾ ವಸೂಲಿ, ಕಳ್ಳರಿಂದ ಬರುವ ಹಫ್ತಾದ ಮೂಲಕ ಯಾರು ದುಡ್ಡು ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ. ಮಲ್ಲೇಶ್ವರಂನ ಜನ ಏನು ಹೇಳುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಹರೀಶ್ ಪೂಂಜ ಎಲ್ಲೂ ಹೋಗಿಲ್ಲ…!
ಗುಡ್ಡ ಕುಸಿತ ಉಂಟಾದಾಗ ಜನರ ಸಮಸ್ಯೆ ಕೇಳಬೇಕಾದ ಹರೀಶ್ ಪೂಂಜಾ ಎಲ್ಲಿ ಎಂದು ಈ ಪ್ರಶ್ನೆ ಮಾಡುತ್ತಿದ್ದಾರೆ ಅಲ್ವಾ ರಕ್ಷಿತ್ ಶಿವರಾಂ. 2019ರಲ್ಲಿ ಪ್ರವಾಹ ಉಂಟಾದಾಗ ಆಗ ಅವರಿಗೆ ತವರೂರಿನ ಬಗ್ಗೆ ನೆನಪು ಆಗಿಲ್ವಾ..? ಆಗ ಯಾಕೆ ಸಹಾಯಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಪಾದಯಾತ್ರೆಗೂ ಮುನ್ನ ನಾನು ನೆರಿಯ ಸೇರಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೆ. ನನ್ನ ಕೈಯಿಂದ ಹಣವು ನೀಡಿದ್ದೆ. ರಕ್ಷಿತ್ ಶಿವರಾಂ ಪೋಸ್ ಕೊಟ್ಟಿದ್ದು ಬಿಟ್ಟರೆ ಒಂದೇ ಒಂದು ರೂಪಾಯಿ ತನ್ನ ಕೈಯಿಂದ ನೀಡಿಲ್ಲ ಎಂದು ಕಿಡಿಕಾರಿದರು.