ಬೆಳ್ತಂಗಡಿ:(ಆ.13) ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕುಲಾಲ ಸಮುದಾಯ ಭವನಕ್ಕೆ ಬಂದಿದ್ದ ವ್ಯಕ್ತಿಯೊಬ್ಬರ ಸ್ಕೂಟರ್ ಕಳ್ಳತನವಾದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಕಾರ್ಯಕ್ರಮ ಮುಗಿಸಿ ಹೊರ ಬಂದು ನೋಡಿದಾಗ ಸ್ಕೂಟರ್ ಕಾಣಿಸಲ್ಲಿಲ್ಲ. ಬಳಿಕ ಸ್ಕೂಟರ್ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.


ಚಿನ್ನಯ್ಯ ಮೂಲ್ಯ ಎಂಬವರಿಗೆ ಸೇರಿದ ಸ್ಕೂಟರ್‌ನ್ನು ಚಾಲಾಕಿ ಕಳ್ಳ ಕದ್ದೊಯ್ದಿದ್ದಾನೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಸಭಾಂಗಣದ ಆವರಣದಲ್ಲಿ ಅಡ್ಡಾಡಿದ ಕಳ್ಳ ಕೆಲವೇ ನಿಮಿಷದಲ್ಲಿ ಸ್ಕೂಟರ್ ಏರಿ ಪರಾರಿಯಾಗಿದ್ದಾನೆ. ಸಭಾಭವನದ ಸಿಸಿ ಟಿವಿಯಲ್ಲಿ ಕಳ್ಳನ ಚಲನವಲನ ದಾಖಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಸ್ಕೂಟರ್ ಮಾಲೀಕರು ಕಾರ್ಯಕ್ರಮದ ಗಡಿಬಿಡಿಯಲ್ಲಿ ಕೀ ಸ್ಕೂಟರ್‌ನಲ್ಲೇ ಬಿಟ್ಟಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಕಳ್ಳ ತಕ್ಷಣ ಸ್ಕೂಟರ್ ಸ್ಟಾರ್ಟ್ ಮಾಡಿ ಎಸ್ಕೇಪ್ ಆಗಿದ್ದಾನೆ.