ಬೆಂಗಳೂರು(ಆ.13) : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದ ವಿಡಿಯೋವೊಂದು ಜನರನ್ನು ಬೆಚ್ಚಿ ಬೀಳಿಸಿದೆ. ಒಂದೆರಡಲ್ಲ ಬರೋಬ್ಬರಿ 8 ವಾಹನಗಳಿಗೆ ಬಿಎಂಟಿಸಿ ವೋಲ್ವೋ ಬಸ್ ಗುದ್ದಿದ್ದು, ಭೀಕರ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: 🩸ಉಜಿರೆ: (ಆ.18) ಉಜಿರೆಯಲ್ಲಿ ಬೃಹತ್ ರಕ್ತದಾನ ಶಿಬಿರ
ಹೆಬ್ಬಾಳ ಫ್ಲೈಓವರ್ ಮೇಲೆ ನಡೆದಿದ್ದು, ಬಿಎಂಟಿಸಿ ವೋಲ್ವೋ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮಂಗಳವಾರ ಹೆಬ್ಬಾಳ ಫ್ಲೈಓವರ್ ಮೇಲೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಆರಂಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಬೈಕ್‌ಗೆ ಗುದ್ದಿದೆ, ಆ ಬೈಕ್ ಮುಂದೆ ಇದ್ದ ಬೈಕ್‌ಗೆ ಗುದ್ದಿದ್ದು, ಅಷ್ಟು ಮಾತ್ರವಲ್ಲದೇ, ಮತ್ತೆ ಮುಂದಕ್ಕೆ ಚಲಿಸಿದ ಬಸ್ ದಾರಿಯುದ್ದಕ್ಕೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ನಿನ್ನೆ ಬೆಳಿಗ್ಗೆ 9-25 ಕ್ಕೆ ಹೆಬ್ಬಾಳ ಫ್ಲೈ ಓವರ್ ಮೇಲೆ ಈ ಘಟನೆ ನಡೆದಿದ್ದು, ಸದ್ಯ ಈ ಅಪಘಾತದ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಸ್ ನಾಲ್ಕು ಕಾರು, ನಾಲ್ಕು ಬೈಕಿಗಳಿಗೆ ಡಿಕ್ಕಿ ಹೊಡೆದಿರುವುದು ಕಂಡು ಬಂದಿದೆ. ಬಸ್ ಗುದ್ದಿದ್ದರಿಂದ ರೋಡಲ್ಲಿ ವಾಹನ ಸವಾರರ ಚಿರಾಟ- ಕೂಗಾಟವೂ ಕೇಳಿಬಂದಿದ್ದು, ಚೂರು ಹೆಚ್ಚು ಕಮ್ಮಿ ಆಗಿರುತ್ತಿದ್ದರೂ ಸಹ ಹತ್ತಾರು ವಾಹನ ಸವಾರರ ಪ್ರಾಣ ಹೋಗುತ್ತಿತ್ತು.