ಕಲ್ಮಂಜ:(ಆ.13) ಕಲ್ಮಂಜ ಗ್ರಾಮದ ಗುತ್ತು ಬೈಲು ಎಂಬಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಕಿರು ಸೇತುವೆಯೊಂದು ಸಂಪೂರ್ಣ ಕೊಚ್ಚಿ ಹೋಗಿತ್ತು. ಈ ವಿಷಯವನ್ನು ಮಾನ್ಯ ಶಾಸಕರ ಗಮನಕ್ಕೆ ತಂದಾಗ ಮಳೆ ಕಡಿಮೆಯಾದಲ್ಲಿ ತಾತ್ಕಾಲಿಕವಾಗಿ ಸಂಪರ್ಕ ವ್ಯವಸ್ಥೆ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು.

ಇದನ್ನೂ ಓದಿ: 🔶ಬೆಳ್ತಂಗಡಿ : ಮೊಗ್ರು ಕಡಮ್ಮಾಜೆ ಫಾರ್ಮ್ಸ್ ನ ಮೀನು ಮೇಳಕ್ಕೆ ಭೇಟಿ ನೀಡಿದ ಹರೀಶ್ ಪೂಂಜಾ

ಅದರಂತೆ ಕೆಲವು ದಿನದಿಂದ ಮಳೆ ಕಡಿಮೆಯಾದರಿಂದ ತಕ್ಷಣವೇ ಇಂದು ತಾತ್ಕಾಲಿಕ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಇದು ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು. ಸರಕಾರದಿಂದ ಯಾವುದೇ ನೆರವು ಬಾರದಿರುವುದರಿಂದ ಕಂಗೆಟ್ಟಿದ್ದ ಕಲ್ಮಂಜ ಗ್ರಾಮಸ್ಥರಿಗೆ ನಿಟ್ಟುಸಿರು ಬಿಡುವಂತಾಗಿದೆ.