Sat. Apr 19th, 2025

Mudubidire: ಕ್ಲಾಸ್‌ ಗೆ ನುಗ್ಗಿ ವಿದ್ಯಾರ್ಥಿನಿ ಮೇಲೆ ಕತ್ತರಿಯಿಂದ ಹಲ್ಲೆ – ಯುವಕ ಪೋಲಿಸರ ವಶಕ್ಕೆ

ಮೂಡುಬಿದಿರೆ :(ಆ.13) ವಿದ್ಯಾರ್ಥಿಯೋರ್ವ ಸ್ನೇಹಿತೆಯ ತರಗತಿಗೆ ನುಗ್ಗಿ ಕತ್ತರಿಯಿಂದ ಇರಿದ ಘಟನೆ ಮೂಡಬಿದಿರೆಯ ಪ್ರತಿಷ್ಠಿತ ಕಾಲೇಜಿನಲ್ಲಿ ನಡೆದಿದೆ.

ಇದನ್ನೂ ಓದಿ: 🔴ಬೆಂಗಳೂರು: ಈ ಬಾರಿ ವಿಜೃಂಭಣೆಯಿಂದ ದಸರಾ ನಾಡಹಬ್ಬ ಆಚರಣೆ – ಸಿಎಂ ಸಿದ್ದರಾಮಯ್ಯ

ತುಮಕೂರು ಮೂಲದವರಾದ ಮಂಜುನಾಥ್ ಹಾಗೂ ಯುವತಿ ಪಿಯುಸಿ ತನಕ ಜೊತೆಯಾಗಿ ವಿದ್ಯಾಭ್ಯಾಸ ನಡೆಸಿದ್ದರು ಎನ್ನಲಾಗಿದೆ.
ಬಳಿಕ ಯುವಕ ಕಾಲೇಜು ತೊರೆದಿದ್ದು, ಯುವತಿ ಕಾಲೇಜು ಸೇರ್ಪಡೆಯಾಗಿದ್ದಳು. ಪಿಯುಸಿವರೆಗೆ ಜೊತೆಯಾಗಿದ್ದ ಇಬ್ಬರ ನಡುವೆ ಪ್ರೇಮವಿತ್ತು ಎನ್ನಲಾಗಿದ್ದು, ಈ ವಿಚಾರ ಯುವತಿಯ ಮನೆಯವರಿಗೆ ತಿಳಿದು, ಮನೆಯವರು ಆಕೆಯ ಬಳಿಯಿದ್ದ ಮೊಬೈಲ್ ವಾಪಸ್ ಪಡೆದಿದ್ದರು ಎನ್ನಲಾಗಿದೆ.


ಈ ಹಿನ್ನಲೆ ಕೋಪಗೊಂಡ ಯುವಕ, ಎರಡು ದಿನಗಳ ಹಿಂದಷ್ಟೇ ಮೂಡುಬಿದಿರೆಗೆ ಆಗಮಿಸಿ ಲಾಡ್ಜ್ ನಲ್ಲಿ ತಂಗಿದ್ದು, ಆಕೆಯ ಭೇಟಿಗೆ ಮುಂದಾಗಿದ್ದಾನೆ. ಸಾಧ್ಯವಾಗದ ಹಿನ್ನಲೆ ನಿನ್ನೆ ಬೆಳಗ್ಗೆ ಕಾಲೇಜಿಗೆ ತೆರಳಿ ಯುವತಿ ಇದ್ದ ತರಗತಿಗೆ ನುಗ್ಗಿ ಕತ್ತರಿಯಲ್ಲಿ ಇರಿದಿದ್ದಾನೆ ಎನ್ನಲಾಗಿದೆ.

ಕೂಡಲೇ ಅಲ್ಲಿದ್ದ ಇತರೆ ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು, ಯುವಕನ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಗಾಯಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *