ಉಜಿರೆ :(ಆ.13) ಶಾಸಕ ಹರೀಶ್ ಪೂಂಜ ಶೇ.40 ಭ್ರಷ್ಟಚಾರ ಮಾಡಿದ್ದಾರೆ ಎಂಬ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಆರೋಪಕ್ಕೆ ಶಾಸಕ ಹರೀಶ್ ಪೂಂಜಾ ತಿರುಗೇಟು ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ರೀತಿಯಲ್ಲಿ ಭ್ರಷ್ಟಾಚಾರ ನಡೆಸಿಲ್ಲ, ಬಿಮಲ್ ಸಂಸ್ಥೆಯಲ್ಲಿ ನನ್ನದು ಯಾವುದೇ ಹೂಡಿಕೆ ಮತ್ತು ಪಾಲುದಾರಿಕೆ ಇಲ್ಲ.
ಇದನ್ನೂ ಓದಿ; 🔴ಕಲ್ಮಂಜ: ಮಳೆಗೆ ಕೊಚ್ಚಿಹೋದ ಕಿರು ಸೇತುವೆಗೆ ತಾತ್ಕಾಲಿಕ ರಸ್ತೆ ನಿರ್ಮಿಸಿ ಕೊಟ್ಟ ಶಾಸಕ ಹರೀಶ್ ಪೂಂಜ
ಅಲ್ಲದೇ ಡಿಪಿ ಜೈನ್ ಕಂಪನಿಯಿಂದ ನಾನು ಮೂರು ಕೋಟಿ ಹಣ ಕಿಕ್ ಬ್ಯಾಕ್ ಎಂದು ಪಡೆದಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಇದು ಕೂಡ ಸುಳ್ಳು ನಾನು ಯಾವುದೇ ರೀತಿಯ ಹಣ ಅವರಿಂದ ಪಡೆದಿಲ್ಲ. ಅಲ್ಲದೇ ಐಬಿಯ ಕಾಮಗಾರಿಯಲ್ಲೂ ಕೂಡ ನಾನು ಯಾವುದೇ ರೀತಿಯ ಭ್ರಷ್ಟಾಚಾರ ನಡೆಸಿಲ್ಲ. ನಾನು ಯಾವುದೇ ರೀತಿಯಲ್ಲಿ ಅಕ್ರಮ ನಡೆಸಿಲ್ಲ ಎಂದು ಈ ಬಗ್ಗೆ , ನಾಳೆ ಬೆಳ್ತಂಗಡಿ ಮಾರಿಗುಡಿಯಲ್ಲಿ ಪ್ರಮಾಣವಚನ ನಡೆಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಒಂದು ವೇಳೆ ನಾನು ಭ್ರಷ್ಟಚಾರ ಮಾಡಿದ್ದೆ ಆದಲ್ಲಿ ನನಗೂ, ನನ್ನ, ಪತ್ನಿ, ಮಕ್ಕಳಿಗೂ ಆ ತಾಯಿ ಶಾಪ ಕೊಡಲಿ. ಒಂದು ವೇಳೆ ನಾನು ಮಾಡಿಲ್ಲ ಎಂದಾದರೆ ಆ ತಾಯಿ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಮತ್ತು ಅವರ ಕುಟುಂಬಕ್ಕೆ ತಾಯಿ ಶಾಪ ಕೊಡಲಿ ಎಂದು ತಿರುಗೇಟು ನೀಡಿದ್ದಾರೆ. ನಾಳೆ ಪ್ರಮಾಣವಚನ ಮಾಡುತ್ತೇನೆ ನೀವು ಕೂಡ ಬನ್ನಿ ಎಂದು ರಕ್ಷಿತ್ ಶಿವರಾಂಗೆ ಶಾಸಕ ಹರೀಶ್ ಪೂಂಜ ಸವಾಲು ಎಸೆದರು.