Fri. Dec 27th, 2024

Daily Horoscope – ಇಂದು ಈ ರಾಶಿಯವರಿಗೆ ಜವಾಬ್ದಾರಿಗಳು ಭಾರವೆನಿಸಬಹುದು!!!

Daily Horoscope - ಇಂದು ಈ ರಾಶಿಯವರಿಗೆ ಆತುರವೇ ಅಪಾಯ ತಂದೊಡ್ಡಬಹುದು

ಮೇಷ ರಾಶಿ : ನಿಮಗೆ ನಂಬಿಕೆಯ ಮೇಲೆ ಆದ ಪ್ರಹಾರವನ್ನು ಸಹಿಸಲಾಗದು. ಬರಬೇಕಾದ ಸಂಪತ್ತು ನಿಮ್ಮ ಕೈಸೇರುವ ನಿರೀಕ್ಷೆ ಇರಲಿದೆ. ಅಧಿಕಾರಯುತವಾದ ಮಾತಿನಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ.

ವೃಷಭ ರಾಶಿ : ಇಂದು ನೀವು ಸ್ತ್ರೀಯರ ವಿಚಾರದಲ್ಲಿ ಸೂಕ್ಷ್ಮಮತಿಗಳಾಗುವಿರಿ. ನೀವು ಸಮಸ್ಯೆಗೆ ಪರಿಹಾರ ಹುಡುಕಲು ಹೋಗಿ ಇನ್ನಷ್ಟು ಸಮಸ್ಯೆಯನ್ನು ಮಾಡಿಕೊಳ್ಳುವಿರಿ. ಆದರೆ ನಿಮ್ಮ ನಿರ್ಧಾರವು ಅಚಲವಾಗಿರಲಿ.

ಮಿಥುನ ರಾಶಿ : ನಕಾರಾತ್ಮಕ ಯೋಚನೆಗಳು ನಿಮ್ಮನ್ನು ಸುಮ್ಮನಿರಲು ಬಿಡದು. ಗುರುಸನ್ನಿಧಿಯನ್ನು ನೀವು ಇಂದು ಬಯಸುವಿರಿ. ದೇವರಿಗೆ ಸಂಬಂಧಿಸಿದ ವಿಚಾರದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಸ್ನೇಹಿತರು ಜಗಳವಾಡಿ ನಿಮ್ಮನ್ನು ಬಿಟ್ಟುಹೋಗುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ : ನೀವು ಇಂದು ಏನನ್ನು ಕೊಡುವುದಿದ್ದರೂ ಮನಃಪೂರ್ವಕವಾಗಿ ಕೊಡುವುದು ಉತ್ತಮ. ಬೇರೆಯವರಿಗೆ ಅಪಕೀರ್ತಿ ತರಲು ಹೋಗಿ ನಿಮ್ಮ ಯಶಸ್ಸನ್ನೇ ಹಾಳುಮಾಡಿಕೊಳ್ಳಬೇಕಾಗುವುದು. ಇಂದ್ರಿಯ ಸಂಯಮವನ್ನು ಸಾಧಿಸುವುದು ಕಷ್ಟವಾದೀತು.

ಸಿಂಹ ರಾಶಿ : ನೀವು ಉಡಾಫೆ ಮಾಡುವ ಸಂಗತಿಗಳೇ ನಿಮಗೆ ಅಂಟಿಕೊಳ್ಳುವುದು. ಮಕ್ಕಳಿಂದ ನಿಮಗೆ ಶುಭವಾರ್ತೆಯು ಇರಬಹುದು. ಸರ್ಕಾರದಿಂದ ಆಗಬೇಕಾದ ಕೆಲಸವನ್ನು ನೀವು ಮಾಡಿಸಿಕೊಳ್ಳಲು ನೀವು ಶ್ರಮಪಡಬೇಕಾದೀತು. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ.

ಕನ್ಯಾ ರಾಶಿ : ಮಹಿಳೆಯರ ಜೊತೆ ಕೆಲಸ ಮಾಡುವುದು ಕಷ್ಟವಾಗುವುದು. ಅವಮಾನದವನ್ನು ನೀವು ಅನುಭವಿಸುವ ಪ್ರಸಂಗವೂ ಬರಬಹುದು. ಪ್ರತ್ಯೇಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಬಯಸುವಿರಿ. ನಿಮ್ಮ ಮಾತುಗಳು ನಿಮಗೆ ತಿರುಗುಬಾಣವಾಗಿ ಬರಬಹುದು.‌

ತುಲಾ ರಾಶಿ : ನಿಮ್ಮ ಇಂದಿನ ಕಾರ್ಯವು ತಾರ್ಕಿಕ ಅಂತ್ಯವನ್ನು ಕಾಣದೇ ಹೋಗಬಹುದು. ನಿಮ್ಮ ಚಂಚಲವಾದ ಮನಸ್ಸನ್ನು ನಿಗ್ರಹಿಸಲು ನಿಮಗೆ ಕಷ್ಟವಾದೀತು. ಕೃಷಿಕರಿಗೆ ಹೆಚ್ಚಿನ ಆದಾಯವು ಬರಬಹುದು. ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ : ಜವಾಬ್ದಾರಿಗಳು ನಿಮಗೆ ಭಾರವೆನಿಸಬಹುದು. ನಿಮ್ಮಿಂದಾಗದು ಎಂಬ ವಿಚಾರವನ್ನು ನೀವು ಹಠವಾಗಿ ತೆಗೆದುಕೊಳ್ಳುವಿರಿ. ನೀವು ಎಲ್ಲರ ವಿರೋಧದ ನಡುವೆಯೂ ನೀವು ಮಾಡಬೇಕಾದುದನ್ನು ಮಾಡುವಿರಿ.

ಧನು ರಾಶಿ : ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರವು ಸಿಗುವುದು. ಇದು ನಿಮ್ಮನ್ನು ಉದ್ವೇಗಕ್ಕೆ ತಳ್ಳಬಹುದು. ಇಂದು ಸಭೆ ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಅನ್ಯರ ಮೂಲಕ ಇಂದು ಮಾಡಿಸಿದ ಎಲ್ಲ ಕೆಲಸಗಳು ಹಾಳಾಗಬಹುದು. ಸ್ತ್ರೀಯರು ನೋವನ್ನು ಅನುಭವಿಸಬೇಕಾದೀತು.

ಮಕರ ರಾಶಿ : ಕಛೇರಿಯ ವ್ಯವಹಾರವು ನಿಮಗೆ ಚಿಂತೆಯನ್ನು ಹೆಚ್ಚು ಮಾಡಬಹುದು. ಉದ್ಯಮದಲ್ಲಿ ಇರುವ ದೌರ್ಬಲ್ಯವನ್ನು ಸರಿ ಮಾಡಿಕೊಳ್ಳಿ. ಅದಕ್ಕಾಗಿ ದೇಹವನ್ನು ದೃಢವಾಗಿಸಿಕೊಳ್ಳುವ ಕುರಿತು ಪ್ರಯತ್ನಿಸುವಿರಿ. ಬೇಡದ ಕಡೆ ಹಣವನ್ನು ವ್ಯಯಿಸುವುದು ಮನೆಯವರಿಗೆ ಇಷ್ಟವಾಗದು.

ಕುಂಭ ರಾಶಿ : ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಶತ್ರುಗಳು ರಾಜಿಯಾಗಲು ಇಂದು ಬರಬಹುದು. ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯಗಳು ಮುನ್ನಡೆದರೆ ಒಳ್ಳೆಯದು. ದೂರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ವೃತ್ತಿಯು ಸಾಕೆನಿಸಬಹುದು.

ಮೀನ ರಾಶಿ : ಗೊಂದಲದ ಕಾರಣದಿಂದ ಯಾವುದನ್ನೂ ಪೂರ್ಣವಾಗಿ ನಿರ್ಧಾರ ಮಾಡಲಾಗದು. ನೀವು ದಿನದ ಆರಂಭದಿಂದ ಕೊನೆಯ ತನಕ ಉತ್ಸಾಹವಿರುವುದು. ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳಲು ಪ್ರಯತ್ನಿಸಿ.
ನಿಮ್ಮನ್ನು ನೀವು ಬುದ್ಧಿವಂತರೆಂದು ತಿಳಿದುಕೊಂಡಿದ್ದರೆ ಅದು ಸುಳ್ಳಾಗಬಹುದು.

Leave a Reply

Your email address will not be published. Required fields are marked *