ಕಟೀಲು :(ಆ.14) ಯುವಕರು ಸಂಘ ಸಂಸ್ಥೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಇದನ್ನೂ ಓದಿ: 🛑ಮಂಗಳೂರು: ಹಲವು ವರ್ಷಗಳ ಪ್ರೀತಿ – ಕೈ ಕೊಟ್ಟ ಪ್ರೇಯಸಿ – ನೊಂದ ಯುವಕ ಆತ್ಮಹತ್ಯೆ.!!
ಕಟೀಲು ಸಾನಿದ್ಯ ಸಭಾಭವನದಲ್ಲಿ ರಾಮ್ ಫ್ರೆಂಡ್ಸ್ (ರಿ.)ಕಟೀಲು ಇದರ ಐದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಹಾಯ ಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಶ್ರೀ ರಾಮ್ ಭಟ್ ಪೊಳಲಿ ಆಶೀರ್ವಚನ ನೀಡಿದರು.
ಗಣ್ಯ ಅತಿಥಿಗಳಾದ ಉದಯ ಪೂಜಾರಿ ಬಲ್ಲಾಳ್ ಬಾಗ್, ರಂಜಿತ್ ಪೂಜಾರಿ ತೋಡಾರು,ವಿಶ್ವ ಕೊಡಿಕೆರೆ, ಶಿವರಾಮ್ ಕೋಟ್ಯಾನ್ ಪೆರ್ಮುದೆ, ಲೋಕಯ್ಯ ಸಾಲಿಯಾನ್ ಕೊಂಡೇಲಾ, ಹರಿಪ್ರಸಾದ್ ಎಕ್ಕಾರ್, ಅಭಿಲಾಷ್ ಶೆಟ್ಟಿ ಕಟೀಲ್, ರಾಜೇಶ್ ಅಮೀನ್ ಪೊರ್ಕೋಡಿ, ಪ್ರಕಾಶ್ ಕುಕ್ಯಾನ್, ಸುಗಂಧಿ ಹರೀಶ್ ಅಮೀನ್ ಮುಂಬೈ, ಸಂಸ್ಥೆಯ ಸ್ಥಾಪಕಾಧ್ಯಕ್ಷ ರಮಾನಂದ ಪೂಜಾರಿ ಕಟೀಲು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಸುವರ್ಣ ಬಡಗ ಮಿಜಾರ್ ಅತಿಥಿಗಳನ್ನು ಸ್ವಾಗತಿಸಿದರು. ವಿ.ಜೆ.ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ತಲಾ ಹತ್ತು ಸಾವಿರದಂತೆ 15 ಅಶಕ್ತ ಕುಟುಂಬದ ಚಿಕಿತ್ಸೆಗೆ ಸಹಾಯ ಹಸ್ತ ನೀಡಲಾಯಿತು.
ಐದು ಸಾವಿರದಂತೆ 5 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ತಲಾ ಒಂದು ಸಾವಿರದಂತೆ 20 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 5ಸಮಾಜ ಸೇವಕರಿಗೆ ಸೇವಾ ಮಾಣಿಕ್ಯ ಪ್ರಶಸ್ತಿ ನೀಡಲಾಯಿತು. 45 ಸಮಾಜ ಸೇವಾ ಸಂಸ್ಥೆಗಳಿಗೆ ಗೌರವಾರ್ಪಣೆ, ಒಟ್ಟು ಎರಡು ಲಕ್ಷ ರೂಪಾಯಿಯ ಸಹಾಯಧನ ನೀಡಲಾಯಿತು.