ಮಂಗಳೂರು:(ಆ.14) ಮಂಗಳೂರು ಯೆಯ್ಯಾಡಿ ಬಳಿ ಸಭಾಂಗಣ ಒಂದರಲ್ಲಿ ಸಂಘವೊಂದು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ದೈವದ ಸಂಬಂಧಿಸಿದ ಹಾಡೊಂದನ್ನು ಹಾಡಲಾಗಿತ್ತು , ಇದಕ್ಕೆ ಪ್ರತಿಯಾಗಿ ಮಹಿಳೆಯೋರ್ವಳು, ತನ್ನ ಮೇಲೆ ದೈವ ಬಂದಂತೆ ನರ್ತನ ಮಾಡಿದ್ದು, ಅದನ್ನು ತಮಾಷೆಗೆ ನೆರೆದಿದ್ದ ಸಭಿಕರು ಮೊಬೈಲ್ನಲ್ಲಿ ಸೆರೆಹಿಡಿದ್ದು, ಬಳಿಕ ಅದನ್ನು ಇತರರಿಗೆ ಫಾರ್ವಡ್ ಮಾಡಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ:🔴ಉಜಿರೆ: ಆ.14 (ಇಂದು) ವಿ.ಹಿ.ಪ., ಬಜರಂಗದಳ ಬೆಳ್ತಂಗಡಿ ಪ್ರಖಂಡ ವತಿಯಿಂದ
ಅಲ್ಲದೆ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ವ್ಯಕ್ತಿಯೋರ್ವರು ಸಂಘಟಕರಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದು ದೈವದ ನರ್ತನ ಮಾಡಿದ ಮಹಿಳೆಯ ಫೋನ್ ನಂಬರ್ ವಿಳಾಸ ಕೇಳಿದ್ದು , ಈ ಕೂಡಲೇ ದೈವದಲ್ಲಿ ಕ್ಷಮೆ ಕೇಳ್ಬೇಕು ಇಲ್ಲದಿದ್ದಲ್ಲಿ ಗ್ರಹಚಾರ ಸರಿ ಇರೋದಿಲ್ಲ ಎಂದು ಎಚ್ಚರಿಸಿದ್ದು , ಆಡಿಯೋ ವೈರಲ್ ಆಗಿದೆ.