Sat. Apr 19th, 2025

Ramanagara: ಬೆಟ್ಟದ ಮೇಲೆ ಕರೆದೊಯ್ದು ಪತ್ನಿಯ ಹತ್ಯೆ- ನಂಬಿಕೆಯೇ ಆಕೆಯ ಸಾವಿಗೆ ಕಾರಣವಾಯಿತಾ?

ರಾಮನಗರ:(ಆ.14) ತಾಲೂಕಿನ ಹೂಜಗಲ್ಲು ಬೆಟ್ಟಕ್ಕೆ ಪತ್ನಿಯನ್ನು ಕರೆದೊಯ್ದ ವ್ಯಕ್ತಿಯೊಬ್ಬ, ಅಲ್ಲೇ ಆಕೆಯನ್ನು ಹತ್ಯೆ ಮಾಡಿ, ಶವ ಎಸೆದುಬಂದ ಘಟನೆ ನಡೆದಿದೆ. ದಿವ್ಯಾ (32) ಗಂಡನಿಂದಲೇ ಕೊಲೆಯಾದ ಮಹಿಳೆ. ಉಮೇಶ್ ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ.

ಇದನ್ನೂ ಓದಿ: 🛑ಉತ್ತರ ಪ್ರದೇಶ: ಕಾರೊಳಗೆ ಇಬ್ಬರು ಮಹಿಳೆಯರ ಜೊತೆ ಯುವಕನ ಸರಸ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ಡಿವೋರ್ಸ್ ಪಡೆಯಲಿಚ್ಚಿಸಿದ್ದರು. ನಿನ್ನೆ ದಂಪತಿ ಮಾಗಡಿ ಕೋರ್ಟ್​ಗೆ ಹಾಜರಾಗಿದ್ದರು. ಬಳಿಕ ಡ್ರಾಮಾ ಮಾಡಿ, ಪತ್ನಿಯನ್ನು ನಂಬಿಸಿ ಉಮೇಶ್ ಹೂಜುಗಲ್ಲು ಬೆಟ್ಟಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ದೇವರಿಗೆ ಪೂಜೆ ಮಾಡುತ್ತಿದ್ದಾಗ ದಿವ್ಯಾಳನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದೆ.


ಬಳಿಕ ಚೀಲೂರು ಅರಣ್ಯ ಪ್ರದೇಶದಲ್ಲಿ ಶವ ಎಸೆದು ಅಲ್ಲಿಂದ ಆತ ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಐವರ ಮೇಲೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪತಿ ಉಮೇಶ್ ಸೇರಿ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

Leave a Reply

Your email address will not be published. Required fields are marked *