ಬೆಳ್ತಂಗಡಿ :(ಆ.15) 78ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಯುವಮೋರ್ಚಾ ವತಿಯಿಂದ ಕುಲಾಲ ಮಂದಿರ ಗುರುವಾಯನಕೆರೆಯಿಂದ ಲಾಯಿಲ ಭಗತ್ ಸಿಂಗ್ ಸರ್ಕಲ್ – ಬೆಳ್ತಂಗಡಿ ಮೂರು ಮಾರ್ಗದ ಬಳಿ ಸ್ಮಾರಕದವರೆಗೆ ತಿರಂಗಾ ಯಾತ್ರೆ ಬೈಕ್ ಜಾಥಾ ನಡೆಯಿತು.
ಇದನ್ನೂ ಓದಿ: 🔶ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ತಂಡದಿಂದ “ಕನಸು ಇದು ಭರವಸೆಯ ಬೆಳಕು”
ಶಾಸಕ ಹರೀಶ್ ಪೂಂಜರವರು ಜಾಥಾಕ್ಕೆ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲ್ ರವರು, ಸ್ವಾತಂತ್ರ್ಯ ಉತ್ಸವದ ಮಹತ್ವ ದೇಶಕ್ಕಾಗಿ ಹೋರಾಡಿದ ವೀರ ಸೇನಾನಿಗಳ ಸ್ಮರಣೆ ಮಾಡಿದರು. ಮುಂದೆಯೂ ದೇಶಾಭಿಮಾನದ ಸಮಾಜಮುಖಿ ಕಾರ್ಯ ಇನ್ನಷ್ಟು ನಡೆಯಲೆಂದು ತಿಳಿಸುತ್ತಾ, ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು.
ಯುವಮೋರ್ಚಾ ಮಂಡಲ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಮಂಡಲ ಪ್ರಧಾನ ಕಾರ್ಯದರ್ಶಿ ಜಯಪ್ರಸಾದ್ ಗೌಡ ಕಡಮ್ಮಾಜೆ, ನಗರ ಪಂಚಾಯತ್ ಸದಸ್ಯರಾದ ಶರತ್ ಕುವೆಟ್ಟು, ಪಂಚಾಯತ್ ಸದಸ್ಯರಾದ ನಿತೀಶ್ ಓಡಿಲ್ನಾಳ ಮಂಡಲ ಹಾಗೂ ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳು, ಯುವಮೋರ್ಚಾ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ಯುವಮೋರ್ಚಾ ಉಪಾಧ್ಯಕ್ಷರಾದ ಗಣೇಶ್ ಲಾಯಿಲ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ ಧನ್ಯವಾದ ಸಮರ್ಪಿಸಿದರು.