Wed. Feb 5th, 2025

Dharmasthala: ಸ್ವಾತಂತ್ರ್ಯ ಎಂದರೆ ಪ್ರಗತಿ, ಸಾಧನೆ – ಡಾ|ಡಿ.ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ:(ಆ.15) ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ|ಡಿ. ವೀರೇಂದ್ರ ಹೆಗ್ಗಡೆಯವರು 78 ನೇ ವರ್ಷದ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.

ಸ್ವಾತಂತ್ರ್ಯ ಎಂದರೆ ಬೆಳವಣಿಗೆ , ಪ್ರಗತಿ , ಸಾಧನೆ. ದೇಶದಲ್ಲಿ ಈ ವರ್ಷ ಒಲಿಂಪಿಕ್ಸ್‌ ನಲ್ಲಿ ಸಾಧನೆಯನ್ನು ಮಾಡಿದ್ದಾರೆ. ಕೃಷಿಯಲ್ಲಿ , ವಿಜ್ಞಾನದಲ್ಲಿ ಸಾಧನೆ ಮಾಡಿದ್ದಾರೆ. ಚಂದ್ರಲೋಕಕ್ಕೆ ಹೋಗುವ ಸಾಧನೆಯನ್ನು ಕೂಡ ಮಾಡಿದ್ದಾರೆ. ಎಲ್ಲಾ ಸಾಧನೆಯನ್ನು ಮಾಡಲು ಸಾಧ್ಯವಾಗಿದ್ದು , ಸ್ವಾತಂತ್ರ್ಯ ಬಂದಿದ್ದರಿಂದ , ಇಲ್ಲದಿದ್ದರೆ , ಬೇರೆಯವರ ಅಡಿಯಾಳಾಗಿ ಇರಬೇಕಾಗಿತ್ತು.

ಅವರು ಹೇಳಿದ ಹಾಗೇ ಕೇಳಬೇಕಿತ್ತು, ಮತ್ತು ನಮಗೆ ಕೀರ್ತಿ ಬರ್ತಿಲ್ಲಿಲ್ಲ. ಭಾರತಕ್ಕೆ ವ್ಯಕ್ತಿತ್ವ ಬಂದಿದೆ. ಎಲ್ಲರೂ ಭಾರತವನ್ನು ಉಲ್ಲೇಖಿಸುತ್ತಿದ್ದಾರೆ. ಎಲ್ಲಾ ಆಟೋಟಗಳಿಂದ ಹಿಡಿದು, ಹೈನುಗಾರಿಕೆ, ಕೃಷಿ, ಎಲ್ಲಾ ರೀತಿಯಲ್ಲೂ ಪ್ರಯತ್ನ ಪಡುತ್ತಿದ್ದೇವೆ. ಐಟಿ ಯಲ್ಲಿ ಅಪೂರ್ವ ಸಾಧನೆಯನ್ನು ಮಾಡಿದ್ದಾರೆ.ಈ ಎಲ್ಲಾ ಸಾಧನೆಗಳಿಗೆ ಕಾರಣವಾದದ್ದು , ಇದೆಲ್ಲಾ ಆಗುತ್ತೆ ಅಂತ ತಿಳಿಯದೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಂದ.

ಸ್ವಾತಂತ್ರ್ಯ ಹೋರಾಟಗಾರರು ಹೋರಾಟ ಮಾಡಿದ್ದಾರೆ. ಈ ದಿನ ಬರುತ್ತೇ , ಇಷ್ಟು ಪ್ರಗತಿ ಆಗುತ್ತೆ, ಕೇವಲ 78 ವರ್ಷಗಳಲ್ಲಿ ಭಾರತ ಇಷ್ಟರ ಮಟ್ಟಿಗೆ ಎತ್ತರ ಬೆಳೆಯುತ್ತೆ ಅಂತ ಖಂಡಿತ ತಿಳಿದುಕೊಂಡಿರಲಿಲ್ಲ. ಎಲ್ಲಾ ಹೋರಾಟಗಾರರನ್ನು ಈ ಸಮಯದಲ್ಲಿ ಸ್ಮರಿಸಬೇಕು.ಅವರಿಂದಾಗಿ ಇಷ್ಟೋದು ಪ್ರಗತಿ, ಸಾಧನೆಗಾಗಿದೆ. ಖಂಡಿತವಾಗಿ ದೇಶದಲ್ಲಿ ಸ್ವಾತಂತ್ರ್ಯದ ಪೂರ್ಣಫಲವನ್ನು ಮುಂದಿನ ಜನಾಂಗ ಪಡೆಯಲಿಕ್ಕಿದೆ. ಎಲ್ಲಾ ರೀತಿಯಿಂದಲೂ ಕೂಡ ದೇಶ ಪ್ರಗತಿಯನ್ನು ಸಾಧಿಸಲಿ ಎಂದು ಶ್ರೀ ಮಂಜುನಾಥ ಸ್ವಾಮಿಯನ್ನು ಈ ಸ್ವಾತಂತ್ರ್ಯೋತ್ಸವದ ದಿವಸ ಪ್ರಾರ್ಥಿಸುತ್ತೇನೆಂದು ವೀರೇಂದ್ರ ಹೆಗ್ಗಡೆಯವರು ಹೇಳಿದರು.

Leave a Reply

Your email address will not be published. Required fields are marked *