Sat. Apr 19th, 2025

Kakkinje: ಹಯಾತುಲ್ ಇಸ್ಲಾಂ ಮದರಸ ಬೀಟಿಗೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕಕ್ಕಿಂಜೆ:(ಆ.15) 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಯಾತುಲ್ ಇಸ್ಲಾಂ ಮದರಸ ಬೀಟಿಗೆ (ಕಕ್ಕಿಂಜೆ) ಯಲ್ಲಿ ಆಚರಿಸಲಾಯಿತು.

ಇದನ್ನೂ ಓದಿ: 🇮🇳Independence Day : ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ನಮ್ಮ ಪೂರ್ವಜರ ರಕ್ತ ನಮ್ಮಲ್ಲಿ ಹರಿಯುತ್ತಿದೆ – Narendra Modi

ಮಸೀದಿಯ ಉಸ್ತಾದರಾದ ಅಬೂಬಕ್ಕರ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸಿದರು.

ಮಸೀದಿಯ ಅಧ್ಯಕ್ಷರಾದ ಸಂಶುದ್ದೀನ್ ಡಿ.ಕೆ. ಇವರು ಸ್ವಾತಂತ್ರ್ಯೋತ್ಸವದ ಸಂದೇಶ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಅಶ್ರಫ್ ಚಾರ್ಮಾಡಿ ಸ್ವಾತಂತ್ರ್ಯ ದಿನಾಚರಣೆಯ ಶುಭನುಡಿಗಳನ್ನು ಹೇಳಿದರು. ಕಾರ್ಯಕ್ರಮಕ್ಕೆ ಅಹಮ್ಮದ್ ಕುಂಞ ಮುಸ್ಲಿಯಾರ್ ದುವಾ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ರಝಾಕ್ ಮುಸ್ಲಿಯಾರ್ ಡಿ.ಕೆ. ಪಂಚಾಯತ್, ಸದಸ್ಯರಾದ ಸಿದ್ದೀಕ್ ಯು.ಪಿ. ಮಸೀದಿಯ ಮಾಜಿ ಅಧ್ಯಕ್ಷರಾದ ಝುಭೈರ್ A.K , ಮಾಜಿ ಕಾರ್ಯದರ್ಶಿ ನಝೀರ್ ಫಾಲ್ಕನ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮದರಸ ಕಾರ್ಯದರ್ಶಿ ಕಬೀರ್ ಬೀಟಿಗೆ ಸ್ವಾಗತಿಸಿ, ನಿರೂಪಿಸಿ, ಧನ್ಯವಾದಗಳನ್ನು ಅರ್ಪಿಸಿದರು.

Leave a Reply

Your email address will not be published. Required fields are marked *