Fri. Apr 18th, 2025

New Delhi: ಕೆಂಪುಕೋಟೆ ಮೇಲೆ ಪ್ರಧಾನಿ ಮೋದಿ ಧ್ವಜಾರೋಹಣ – ಹೊಸ ದಾಖಲೆ ಬರೆದ ಪ್ರಧಾನಿ, ಏನದು?

ಹೊಸದಿಲ್ಲಿ:(ಆ.15) ಭಾರತ 78ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿದೆ. ಈ ಹಿನ್ನೆಲೆ ಹೊಸದಿಲ್ಲಿಯಲ್ಲಿರುವ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿದರು. ಕೇಸರಿ, ಹಸಿರು ಬಣ್ಣದ ಪೇಟ ತೊಟ್ಟು, ಬಿಳಿ ಕುರ್ತಾ ಮೇಲೆ ನೀಲಿ ಬಣ್ಣದ ಮೇಲಂಗಿ ತೊಟ್ಟಿದ್ದ ಮೋದಿ ಧ್ವಜಾರೋಹಣ ನೆರವೇರಿಸಿದರು.

ಇದನ್ನೂ ಓದಿ: 🇮🇳ಧರ್ಮಸ್ಥಳ: ಸ್ವಾತಂತ್ರ್ಯ ಎಂದರೆ ಪ್ರಗತಿ, ಸಾಧನೆ – Dr. D. Veerendra Heggade

ಪ್ರಧಾನಿ ಮೋದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಥ್ ನೀಡಿದರು. ಪ್ರಧಾನಿ ಮೋದಿ ಕೆಂಪುಕೋಟೆ ಮೇಲೆ 11ನೇ ಬಾರಿಗೆ ದ್ವಜಾರೋಹಣ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.

ಮನಮೋಹನ್ ಸಿಂಗ್ ಅತೀ ಹೆಚ್ಚು ಅಂದರೆ 10 ಭಾರೀ ಧ್ವಜಾರೋಹಣ ನೆರವೇರಿಸಿದರು. ಇನ್ನು ಪ್ರಧಾನಿ ಮೋದಿ ಆಗಮಿಸುವ ವೇಳೆ ಸೇನಾಪಡೆಗಳು ಗೌರವ ವಂದನೆ ಸಲ್ಲಿಸಿದರು. ಇನ್ನು ಭಾರತದ ತ್ರಿವರ್ಣ ಧ್ವಜದ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಟಿ ಮಾಡಲಾಯ್ತು.

Leave a Reply

Your email address will not be published. Required fields are marked *