ಪುತ್ತೂರು:(ಆ.15) ನಗರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಅದ್ರಾಮ ಎನ್ ಅವರು 2024ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಗೊಂಡಿದ್ದಾರೆ.
ದ.ಕ.ಜಿಲ್ಲೆಯಲ್ಲೇ ಪುತ್ತೂರಿಗೆ ಚಿನ್ನದ ಪದಕ ಅದ್ರಾಮ ಅವರಿಗೆ ಒಳಿದಿದೆ. ಅದ್ರಾಮ ಅವರು ಪೊಲೀಸ್ ಇಲಾಖೆಗೆ 2005ರಲ್ಲಿ ಸೇರ್ಪಡೆಗೊಂಡು ಉರ್ವಾ, ಬಂಟ್ವಾಳ ನಗರ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ಅವರು ಅಲ್ಲಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಮೂಲತಃ ಅಜ್ಜಿನಡ್ಕದವರಾಗಿರುವ ಇವರು ಪ್ರಸ್ತುತ ಪುಣಚ ಗ್ರಾಮದ ಪರಿಯಲ್ತಡ್ಕದಲ್ಲಿ ವಾಸ್ತವ್ಯ ಹೊಂದಿದ್ದಾರೆ. ಇವರ ಪತ್ನಿ ಆಯಿಷಾ ಮತ್ತು ಮೂವರು ಮಕ್ಕಳೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.