Fri. Dec 27th, 2024

Ujire: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಉಜಿರೆ :(ಆ.15) ಅನುಗ್ರಹ ಶಿಕ್ಷಣ ಸಂಸ್ಥೆಗಳಲ್ಲಿ 78ನೇ ಸ್ವಾತಂತ್ರ್ಯೋತ್ಸವವು ಶಾಲಾ ಸಂಚಾಲಕರಾದ ವಂ!ಫಾ! ಅಬೆಲ್ ಲೋಬೋರವರ ಅಧ್ಯಕ್ಷತೆಯಲ್ಲಿ ಜರಗಿತು.

ಇದನ್ನೂ ಓದಿ: 🇮🇳ಬಂದಾರು : ಬಂದಾರು ಸ.ಹಿ.ಉ.ಪ್ರಾ.ಶಾಲೆಯಲ್ಲಿ 78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

ಮಡಂತ್ಯಾರು ಸೆಕ್ರೇಡ್ ಆರ್ಟ್ ಕಾಲೇಜಿನ ಉಪನ್ಯಾಸಕರಾದ ಶ್ರೀ ನೆಲ್ಸನ್ ಮೋನಿಸ್ ರವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋವದ ಶುಭ ಸಂದೇಶವನ್ನು ನೀಡಿದರು.

ವಿದ್ಯಾರ್ಥಿಗಳು ಶಾಲಾ ಜೀವನದಲ್ಲಿ ದೇಶ ಪ್ರೇಮವನ್ನು ಬೆಳೆಸಿಕೊಳ್ಳಲು ಕರೆಯಿತ್ತರು. ಸಮಾರಂಭದಲ್ಲಿ ಶಾಲಾ ಪ್ರಾಂಶುಪಾಲರಾದ ವಂ! ಫಾ! ವಿಜಯ್ ಲೋಬೋ, ಎಸ್. ಎಮ್.ಐ ಸಭೆಯ ಮುಖ್ಯಸ್ಥರಾದ ಸಿಸ್ಟರ್ ಅ್ಯನ್ಸಿ ಪ್ರಾನ್ಸಿಸ್, ಪಾಲನಾ ಮಂಡಳಿ ಉಪಾಧ್ಯಕ್ಷರಾದ ಶ್ರೀ ಆ್ಯಂಟನಿ ಫೆರ್ನಾಂಡಿಸ್‌, ಕಾರ್ಯದರ್ಶಿಗಳಾದ ಶ್ರೀ ಲಿಗೋರಿ ವಾಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಉಮೇಶ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಅನಿತಾ ಮೋನಿಸ್, ಸ್ಟಾನಿ ಪಿಂಟೋ ಹಾಗೂ ಪಂಚಾಯತ್ ಸದಸ್ಯರಾದ ಶ್ರೀ ಅನಿಲ್ ಡಿʼಸೋಜ ಮತ್ತು ಪ್ರವೀಣ್ ಡಿʼಸೋಜ ಬೆಳಾಲ್ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಶ್ರೀಮತಿ ಐರಿನ್ ರೊಡ್ರಿಗಸ್ ರವರು ನಿರೂಪಿಸಿ ವಂದಿಸಿದರು. ಮಕ್ಕಳಿಗೆ ಸಿಹಿತಿಂಡಿ ಹಂಚಲಾಯಿತು.

Leave a Reply

Your email address will not be published. Required fields are marked *