Fri. Mar 14th, 2025

Belthangady: ಶಂಸುಲ್ ಹುದಾ ಜುಮ್ಮಾ ಮಸೀದಿ ಕುಂಡಡ್ಕ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ:(ಆ.16) ಶಂಸುಲ್ ಹುದಾ ಜುಮಾ ಮಸೀದಿ ಕುಂಡಡ್ಕ ವತಿಯಿಂದ 78ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ಕಮಿಟಿಯ ಅಧ್ಯಕ್ಷರಾದ ಎಂ.ಕೆ ಅಬ್ದುಲ್ ರಶೀದ್ ಕುಂಡಡ್ಕ ಇವರ ನೇತೃತ್ವದಲ್ಲಿ ಕುಂಡಡ್ಕ ಮಸೀದಿಯ ವಠಾರದಲ್ಲಿ ನಡೆಯಿತು.

ಇದನ್ನೂ ಓದಿ: 🇮🇳ಪುತ್ತೂರು: ಪುತ್ತೂರು ನೈರುತ್ಯ ರೈಲ್ವೆ ನಿಲ್ದಾಣ ಕಬಕ ವಠಾರ ದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಆಲ್ ಹಾಜಿ ಈ.ಕೆ ಇಬ್ರಾಹಿಂ ಮದನಿ ಖಾಝಿ ಕೃಷ್ಣಾಪುರ ಸ್ವಾತಂತ್ರ್ಯ ಸಮರಕ್ಕಾಗಿ ಜಾತಿ ಮತ ನೋಡದೆ ಎಲ್ಲರೂ ಒಟ್ಟಾಗಿ ಹೋರಾಟ ಮಾಡಿ ಸ್ವಾತಂತ್ರ್ಯ ಗಳಿಸಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದ ಮುಖ್ಯ ಮಾತುಗಳನ್ನಾಡಿದ ಮಾಡಿದ ಎಂ.ಕೆ ಅಬ್ದುಲ್ ಸಮದ್ ಕುಂಡಡ್ಕ ಅಧ್ಯಕ್ಷರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ, ನಮ್ಮ ಭಾರತ ದೇಶ ಸ್ವಾತಂತ್ರ್ಯ ಸಮರಕ್ಕೆ ಹೋರಾಟ ನಡೆಯುವಾಗ ಹಿಂದೂ ಮುಸ್ಲಿಂ ಕ್ರೈಸ್ತ , ಯಾವುದೇ ಜಾತಿ ಮತ ನೋಡದೆ ಸ್ವಾತಂತ್ರ್ಯ ಸಮರಕ್ಕೆ ಹೋರಾಡಿದರು ಎಂಬುದನ್ನು ಸವಿಸ್ತಾರವಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಇಲ್ಯಾಸ್ ಮದನಿ ಮಾಚಾರ್, ಖತೀಬ್ ಕುಂಡಡ್ಕ, ಮಸೀದಿಯ ಉಪಾಧ್ಯಕ್ಷರಾದ ಬಶೀರ್ ಸೀಮ್ಮುಳು, ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಯು.ಕೆ , ಸಲಾತ್ ಕಮಿಟಿ ಅಧ್ಯಕ್ಷರಾದ ಸುಲೈಮಾನ್ ಮುಸ್ಲಿಯಾರ್ ಕೇರ್ಯ ಹಾಗೂ ಎಸ್ ಎಸ್ ಎಫ್ ನ ಅಧ್ಯಕ್ಷರಾದ ಹನೀಫ್ ಕೇರ್ಯ, ಸದಸ್ಯರುಗಳಾದ ತೌಪೀಕ್ ಯು.ಕೆ ಜಬೀರ್ ಸಿಮುಳ್ಳು, ಆಫೀಝ್ ಸಿಮ್ಮುಳು, ಆರಿಸ್ ಕೇರ್ಯ ಮುಂತಾದವರು ಉಪಸ್ಥಿತರಿದ್ದರು.

ಹಮೀದ್ ಮುಸ್ಲಿಯರ್ ಕುಂಡಡ್ಕ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *