ಮೇಷ ರಾಶಿ: ಮಕ್ಕಳ ಭವಿಷ್ಯಕ್ಕೆ ಸಂಪತ್ತು ಮಾಡುವ ಯೋಚನೆ ಬರುವುದು. ನಿಮ್ಮದಾದ ಕೆಲಸಗಳನ್ನು ಇಂದು ಬಾಕಿ ಉಳಿಸಿಕೊಳ್ಳುವುದು ಬೇಡ. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ನೀವು ಒಬ್ಬರೇ ತೆಗೆದುಕೊಳ್ಳಬೇಡಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು. ಸೂಕ್ತ ಚಿಕಿತ್ಸೆ ಅವಶ್ಯಕ.
ವೃಷಭ ರಾಶಿ: ಹಿರಿಯರ ಮೇಲಿನ ಪ್ರೀತಿಯಿಂದ ನೀವು ಸೇವೆ ಮಾಡುವಿರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆಲಸ್ಯತನವನ್ನು ತೋರಿಸುವರು. ನಿಮ್ಮ ಆಲೋಚನೆಗಳು ನಕಾರಾತ್ಮಕವಾಗಿ ಇರಲಿದೆ. ನೀವು ಇಂದು ಕುಲದೇವರ ದರ್ಶನಕ್ಕೆ ತೆರಳಲಿದ್ದೀರಿ. ನಿಮ್ಮ ಆಸಕ್ತಿಯ ಕೆಲಸವನ್ನು ಇಂದು ಮಾಡಲಾಗದೇ ಇದ್ದೀತು. ಆಪ್ತರ ಅನಾರೋಗ್ಯಕ್ಕೆ ನೀವು ಸಹಾಯ ಮಾಡುವಿರಿ.
ಮಿಥುನ ರಾಶಿ: ಹಣವು ತಿರುಗಿ ಬರುವುದು ನಿಮಗೆ ಸಮಾಧಾನ ತರಲಿದೆ. ಯಾರದೋ ಆಡಿದ ಮಾತಿನಿಂದ ನೀವು ನಿಮ್ಮವರನ್ನು ಕಳೆದುಕೊಳ್ಳಬಹುದು. ನೀವು ಮಾಡಲು ಹೊರಟ ಕೆಲಸಕ್ಕೆ ಹಿತಶತ್ರುಗಳಿಂದಲೇ ತೊಂದರೆಯಾಗಬಹುದು. ಪರರು ಕೇಳಿದ ಸಹಾಯವನ್ನು ಮಾಡಿ.
ಕರ್ಕಾಟಕ ರಾಶಿ: ಹಳೆಯ ಪ್ರೀತಿಯಿಂದ ನಿಮಗೆ ಕಷ್ಟವಾದೀತು. ಸಾಹಿತ್ಯ ಕ್ಷೇತ್ರದಲ್ಲಿ ನೀವು ಸಾಧಿಸುವ ಕೆಲಸದ ಬಗ್ಗೆ ಇಂದು ಯೋಚಿಸುವಿರಿ. ಉದ್ಯೋಗದಲ್ಲಿ ನಿಮ್ಮ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಪುಣ್ಯಸ್ಥಳಗಳಿಗೆ ಹೋಗುವ ಕನಸು ಭಗ್ನವಾಗುವುದು. ಆರ್ಥಿಕತೆಯನ್ನು ಸರಿದೂಗಿಸಲು ನೀವು ಏನಾದರೂ ಹೊಸ ಯೋಜನೆಯನ್ನು ರೂಪಿಸಬಹುದು.
ಸಿಂಹ ರಾಶಿ: ನೀವು ಕೈಗೊಂಡ ಪ್ರಯಾಣವು ಸುಖಕರವಾಗದೇ ಇರಬಹುದು. ನಿಮ್ಮ ಬಂಧುಮಿತ್ರರು ನಿಮಗೆ ಸಲ್ಲದ್ದನ್ನು ಮಾಡುವರು. ಅವರ ಜೊತೆ ಕಲಹವಾಗುವ ಸಾಧ್ಯತೆ ಇದೆ. ಆಸ್ತಿಯ ವಿಚಾರದಲ್ಲಿ ನಿಮಗೆ ಸಮಪಾಲ ಸಿಗದೇ ಹೋಗಬಹುದು. ನಿಮ್ಮನ್ನು ಯಾರಾದರೂ ರಹಸ್ಯವಾಗಿ ಗಮನಿಸುತ್ತಿದ್ದಾರೆ ಎಂಬ ಸಂದೇಹ ಬರಬಹುದು.
ಕನ್ಯಾ ರಾಶಿ: ಆರ್ಥಿಕ ತೊಂದರೆಯನ್ನು ನೀವು ಸಲೀಸಾಗಿ ಸರಿಮಾಡಿಕೊಳ್ಳುವಿರಿ. ಸಜ್ಜನರ ಸಹವಾಸದಿಂದ ಸಂತೋಷ ಸಿಗಲಿದೆ. ನಿಮ್ಮನ್ನು ಗೌರವಿಸಿದವರಿಗೆ ಪ್ರತಿಯಾಗಿ ಗೌರವಿಸಿ. ಅನಾರೋಗ್ಯದ ಕಾರಣ ನೀವು ಸಾಲವನ್ನು ಮಾಡಬೇಕಾಗಬಹುದು. ನಿಮ್ಮ ಕೂಡಿಟ್ಟ ಹಣವು ಆಪತ್ಕಾಲದಲ್ಲಿ ಸಿಗುವುದು ಕಷ್ಟವಾದೀತು.
ತುಲಾ ರಾಶಿ: ಅಪರಿಚಿತ ಕರೆಗಳಿಂದ ನಿಮಗೆ ಭಯವಾಗಬಹುದು. ದೊಡ್ಡ ಕಲ್ಪನೆಯನ್ನು ನೀವು ಇಟ್ಟುಕೊಂಡು ಮುಂದವರಿಯುವಿರಿ. ವಿದ್ಯಾರ್ಥಿಗಳು ಅಲ್ಪ ಯಶಸ್ಸಿಗೆ ಸಂತೋಷಪಡಬೇಕಾದೀತು. ಅಧಿಕ ಸಂಪಾದನೆಗೆ ಹೆಚ್ಚು ಶ್ರಮವೂ ಬೇಕು. ವಿದೇಶದಲ್ಲಿ ಇರುವವರಿಗೆ ಅಶುಭವಾರ್ತೆಯು ಬರಬಹುದು.
ವೃಶ್ಚಿಕ ರಾಶಿ: ಯಾವುದಾದರೂ ಕಾರ್ಯಕ್ಕೆ ನಿಮ್ಮವರ ವಿರೋಧ ಬರಬಹುದು. ಸಂಗಾತಿಯ ಜೊತೆ ಇಂದು ಹಣದ ವಿಚಾರದಲ್ಲಿ ವೈಮನಸ್ಯ ಉಂಟಾಗಲಿದೆ. ಇಂದು ನಿಮ್ಮ ಉತ್ಸಾಹವು ಕಡಿಮೆ ಇರಲಿದೆ. ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಕಷ್ಟಪಡುವಿರಿ. ನಿಮ್ಮ ಸ್ವಾರ್ಥ ಮನೋಭಾವವು ನಿಮ್ಮನ್ನು ಸಣ್ಣವರನ್ನಾಗಿ ಮಾಡಬಹುದು.
ಧನು ರಾಶಿ: ಕೌಟುಂಬಿಕ ಜವಾಬ್ದಾರಿಗಳು ಬರಬಹುದು. ಆತುರದ ವ್ಯವಹಾರದಿಂದ ನಿಮಗೆ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ನೀವು ಅಂದುಕೊಳ್ಳುವ ವಿಚಾರಗಳು ನಿಮ್ಮದಷ್ಟೇ ಆಗಿರುವುದಿಲ್ಲ. ಶತ್ರುಗಳ ಮೇಲೆ ನಿಮ್ಮ ಗಮನವು ಇರಲಿದೆ.
ಮಕರ ರಾಶಿ: ನಿಮ್ಮಿಂದ ಉಪಕಾರ ಪಡೆದವರು ಕೃತಜ್ಞತೆ ಸಲ್ಲಿಸಬಹುದು. ಕೇಳಿದ್ದನ್ನು ಸಂಗಾತಿಯಿಂದ ಪಡೆಯಲು ಅಸಾಧ್ಯವಾದೀತು. ವಾಯುವಿಹಾರಕ್ಕೆ ನೀವು ಸಂಗಾತಿಯ ಜೊತೆ ಹೋಗಬಹುದು. ಆರೋಗ್ಯವನ್ನು ನೀವು ಗಮನದಲ್ಲಿಟ್ಟುಕೊಂಡು ಆಹಾರವನ್ನು ಸ್ವೀಕರಿಸಿ. ಅನ್ಯರಿಗೆ ಸಹಕಾರ ನೀಡುವ ಗುಣವನ್ನು ಮೆಚ್ಚಿಕೊಳ್ಳುವರು.
ಕುಂಭ ರಾಶಿ: ದೈವಭಕ್ತಿಯಿಂದ ನೀವು ನೆಮ್ಮದಿ ಕಾಣಲು ಸಾಧ್ಯ. ಸಿರಿವಂತರಾಗಲು ನೀವು ಆಯ್ಕೆ ಮಾಡಿಕೊಂಡ ದಾರಿಯು ಸರಿಯಿರದು. ನಿಮ್ಮ ಬಗ್ಗೆಯೇ ನೀವು ಅವಲೋಕನ ಮಾಡಿಕೊಂಡು ನಿರ್ಧಾರವನ್ನು ತೆಗೆದುಕೊಳ್ಳಿ. ನೀವು ಇಂದು ಸ್ವಭಾವವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ.
“ಮೀನ ರಾಶಿ: ನಿಮ್ಮ ಅನುಮಾನದ ಕಾರಣದಿಂದ ಸಂಗಾತಿಯನ್ನು ದ್ವೇಷಿಸುವಿರಿ. ಸಹಜವಾಗಿ ಅವರ ಜೊತೆ ವರ್ತಿಸಿ. ಕೆಲವು ನಿರ್ಧಾರಗಳಿಂದ ಆರ್ಥಿಕವಾಗಿ ನಷ್ಟವಾಗುವುದು. ಯಾರ ಮೇಲೂ ಒತ್ತಡವನ್ನು ಹೇರುವುದು ಬೇಡ. ಅವರವರ ಬದುಕು ಅವರವರಿಗೇ ಇರಲಿದೆ. ನೀವು ಅವರನ್ನು ದಾರಿತಪ್ಪಿಸುವ ಅವಶ್ಯಕತೆ ಇಲ್ಲ.