ಉಜಿರೆ:(ಆ.16) ವಿಶ್ವ ಹಿಂದೂ ಪರಿಷದ್, ಬಜರಂಗದಳ, ದುರ್ಗಾವಾಹಿನಿ, ಮಾತೃಶಕ್ತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಬೃಹತ್ ಪಂಜಿನ ಮೆರವಣಿಗೆ ಕಾರ್ಯಕ್ರಮ ಆ. 14 ರಂದು ಉಜಿರೆ ಶಾರದಾ ಮಂಟಪದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: 🇮🇳ಉಜಿರೆ: ಉಜಿರೆಯ ವರ್ತಕರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ
ಮೊದಲನೆಯಾಗಿ ದೀಪ ಪ್ರಜ್ವಲಿಸುವ ಮೂಲಕ ಛತ್ರಪತಿ ಶಿವಾಜಿ ಭಜನಾ ಮಂಡಳಿ ಉಜಿರೆ ಮತ್ತು ಮತ್ತೂರು ಪಂಚಲಿಂಗೇಶ್ವರ ಭಜನಾ ಮಂಡಳಿ ಚಾರ್ಮಾಡಿ ಇವರಿಂದ ಕುಣಿತ ಭಜನಾ ನಡೆಯಿತು.
ನಂತರ ಭಾರತ ಮಾತೆಗೆ ಪುಷ್ಪಾರ್ಚಣೆ ಮಾಡುವುದರ ಮೂಲಕ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಂಪತ್ ಬಿ.ಸುವರ್ಣ ಅಧ್ಯಕ್ಷರು, ಸಂಸ್ಕಾರ ಭಾರತಿ ಬೆಳ್ತಂಗಡಿ ಇವರು ವಹಿಸಿದ್ದರು.
ಶ್ರೀ ಸುನೀಲ್ ಕೆ.ಆರ್. ಪ್ರಾಂತ ಧರ್ಮ ಪ್ರಚಾರ ಪ್ರಮುಖ್ ವಿಶ್ವ ಹಿಂದೂ ಪರಿಷತ್ ದಿಕ್ಸೂಚಿ ಭಾಷಣ ಮಾಡಿದರು.
ಗುರು ಬಂಟ್ವಾಳ ಅಧ್ಯಕ್ಷರು ವಿ.ಹಿಂ.ಪ ಪುತ್ತೂರು ಜಿಲ್ಲೆ ಶ್ರೀ ದಿನೇಶ್ ಚಾರ್ಮಾಡಿ ಅಧ್ಯಕ್ಷರು ವಿ.ಹಿಂ.ಪ.ಬೆಳ್ತಂಗಡಿ ಪ್ರಖಂಡ, ಶ್ರೀ ಸಂತೋಷ್ ಅತ್ತಾಜೆ ಸಂಚಾಲಕರು ಬಜರಂಗದಳ ಬೆಳ್ತಂಗಡಿ ಪ್ರಖಂಡ ಶ್ರೀ ಪದ್ಮನಾಭ ಶೆಟ್ಟಿಗಾರ್ ಉದ್ಯಮಿಗಳು ಉಜಿರೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಸತೀಶ್ ನೆರಿಯ ಉಪಾಧ್ಯಕ್ಷರು ವಿ.ಹಿಂ.ಪ ಬೆಳ್ತಂಗಡಿ ಪ್ರಖಂಡ, ಮೋಹನ್ ಬೆಳ್ತಂಗಡಿ ಕಾರ್ಯದರ್ಶಿ ವಿ,ಹಿಂ.ಪ ಬೆಳ್ತಂಗಡಿ ಪ್ರಖಂಡ, ರಮೇಶ್ ಧರ್ಮಸ್ಥಳ ಗೋ ರಕ್ಷಾ ಪ್ರಮುಖ್ ವಿ.ಹಿಂ.ಪ ಬೆಳ್ತಂಗಡಿ ಪ್ರಖಂಡ, ಅನಂತು ಉಜಿರೆ ಗೋ ರಕ್ಷಾ ಪ್ರಮುಖ್ ಬಜರಂಗದಳ ಬೆಳ್ತಂಗಡಿ ಪ್ರಖಂಡ, ನಾಗೇಶ್ ಕಲ್ಮಂಜ ಪ್ರಚಾರ ಮತ್ತು ಪ್ರಸಾರ ಪ್ರಮುಖ್ ವಿ.ಹಿಂ.ಪ ಬಜರಂಗದಳ ಬೆಳ್ತಂಗಡಿ ಪ್ರಖಂಡ ಹಾಗೂ ಹಿಂದೂ ಕಾರ್ಯಕರ್ತರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಜನಾ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಉಜಿರೆ ಪೇಟೆಯಲ್ಲಿ ಜೈಕಾರದೊಂದಿಗೆ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಕೊನೆಯದಾಗಿ ಉಜಿರೆ ಪೇಟೆಯಲ್ಲಿ ಜಗನ್ನಾಥ ಶೆಟ್ಟಿ ನಿವೃತ್ತ ಯೋಧರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.