ಬೆಳ್ತಂಗಡಿ;(ಆ.17) ವಯೋವೃದ್ದರಾದ ತಂದೆ ನಿಧನರಾದ ಐದನೇ ದಿನಕ್ಕೇ ಮಗನೂ ನಿಧನರಾದ ಘಟನೆ ಮುಂಡಾಜೆ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: 🛑ಹಾಸನ: ಒಂದೇ ಕುಟುಂಬದ ಮೂವರು ದುರಂತ ಅಂತ್ಯ
ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಪುತ್ತಾಕ ಅವರು ಮೃತರಾದ ಐದನೇ ದಿನ ಆ.16 ರಂದು ಅವರ ಮಗ ಅಬೂಬಕ್ಕರ್ ಕೂಳೂರು (50) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತೀವ್ರ ಅನಾರೋಗ್ಯಕ್ಕೊಳಗಾಗಿ ಕಳೆದ ನಾಲ್ಕೂವರೆ ತಿಂಗಳಿನಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲೇ ಇದ್ದ ಅಬೂಬಕ್ಕರ್ ಅವರು ಗುರುವಾರ ರಾತ್ರಿ ವೇಳೆ ಅಸುನೀಗಿದರು.
ಅಬೂಬಕ್ಕರ್ ಅವರ ತಂದೆ ಹಿರಿಯ ಮೇಸ್ತ್ರೀಗಳಾಗಿದ್ದ ಪುತ್ತಾಕ ಕೂಳೂರು ಅವರು ಕಳೆದ ಸೋಮವಾರವಷ್ಟೇ ನಿಧನರಾಗಿದ್ದು, ಅವರ ಮೂರನೇ ದಿನದ ಕಾರ್ಯಕ್ರಮ ಬುಧವಾರ ಸಂಜೆಯಷ್ಟೇ ಅವರ ಮನೆಯಲ್ಲಿ ನಡೆದಿತ್ತು. ಇದೀಗ ಮೃತರಾದ ಅಬೂಬಕ್ಕರ್ ಅವರು ಸಿವಿಲ್ ಗುತ್ತಿಗೆದಾರರಾಗಿದ್ದು ಕಟ್ಟಡ ನಿರ್ಮಾಣ, ಬಾವಿಗೆ ರಿಂಗ್ ಅಳವಡಿಕೆ ಇತ್ಯಾದಿ ಕೆಲಸಗಳಲ್ಲಿ ವಿಶೇಷ ಅನುಭವಿಯಾಗಿದ್ದರು.
ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಇದರ ಆಡಳಿತ ಸಮಿತಿ ಸದಸ್ಯರಾಗಿ, ‘ಮಸ್ಲಕ್’ ಮುಂಡಾಜೆ ಇದರ ಸ್ಥಾಪಕರಲ್ಲೋರ್ವರಾಗಿ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದರು.
ಮೃತರು ತಾಯಿ, ಸಹೋದರರು, ಪತ್ನಿ, ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.