Wed. Nov 20th, 2024

Dharmasthala: ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ. ಟ್ರಸ್ಟ್(ರಿ.) ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ (ರಿ.) ಧರ್ಮಸ್ಥಳ ಇದರ ಆಶ್ರಯದಲ್ಲಿ”ವ್ಯಸನಮುಕ್ತರ ನವಜೀವನೋತ್ಸವ” ಕಾರ್ಯಕ್ರಮ – ಪಾನ ಮುಕ್ತ ಗ್ರಾಮ ಸಾಧಕರಿಗೆ ಗೌರವ – ಜಾಗೃತಿ ಅಣ್ಣ /ಮಿತ್ರ ಪ್ರಶಸ್ತಿ ಪ್ರದಾನ

ಧರ್ಮಸ್ಥಳ:(ಆ.17) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) ಧರ್ಮಸ್ಥಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ (ರಿ.) ಧರ್ಮಸ್ಥಳ ಇದರ ಆಶ್ರಯದಲ್ಲಿ ರಾಜ್ಯಾದ್ಯಂತ ನಡೆಸಲಾದ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಸಂತೃಪ್ತ ಜೀವನ ನಡೆಸುತ್ತಿರುವ, ವ್ಯಸನಮುಕ್ತರ ನವಜೀವನೋತ್ಸವ ಕಾರ್ಯಕ್ರಮವು ಆ.17 ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.

ಇದನ್ನೂ ಓದಿ: 🛑MUDA scam: ಸಿಎಂ ಕೊರಳಿಗೆ ‘ಮುಡಾ’ ಉರುಳು

ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮ ಉದ್ಘಾಟಿಸಿ, ಸಂದೇಶ ನೀಡಿದರು. ತುಮಕೂರು ಜಿಲ್ಲೆಯ ಬೆಳ್ಳಾವಿ ಶ್ರೀ ಕಾರದೇಶ್ವರ ಮಠದ ಮಹಾಸ್ವಾಮೀಜಿ ಶ್ರೀ ಶ್ರೀ ಕಾರದ ವೀರಬಸವರವರು ಆಶೀರ್ವಚನ ನೀಡಿದರು.

ಶ್ರೀ ಕ್ಷೇ.ಧ. ಗ್ರಾ. ಯೋ ಮುಖ್ಯ ಕಾರ್ಯನಿರ್ವಹಣಾರ್ಧಿಕಾರಿ ಅನಿಲ್ ಕುಮಾರ್ ಎಸ್.ಎಸ್ , ಸಂಶೋಧಕರಾದ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆ ಡಾ| ಅಭಿಷೇಕ್ ಚತುರ್ವೇಧಿ, ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಮೇಖಲಾ ದಿವಾಕರ್ ರವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿ, ಆಶಯ ನುಡಿಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನ ಟ್ರಸ್ಟಿಗಳಾದ ಡಾ| ಪಿ.ವಿ. ಭಂಡಾರಿ, ಡಾ| ಶ್ರೀನಿವಾಸ್ ಭಟ್, ವಿ. ರಾಮಸ್ವಾಮಿ, ಬೆಳ್ತಂಗಡಿ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷರಾದ ವಸಂತ ಸಾಲ್ಯಾನ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಪದ್ಮನಾಭ ಶೆಟ್ಟಿ, ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಕಾಸಿಂ ಮಲ್ಲಿಗೆ ಮನೆ ಉಪಸ್ಥಿತರಿದ್ದರು.

ಜಾಗೃತಿ ಅಣ್ಣ/ಮಿತ್ರ ಪ್ರಶಸ್ತಿ ಪ್ರದಾನವನ್ನು ಶಾಸಕ ಹರೀಶ್ ಪೂಂಜ ಹಾಗೂ ಗುರುತಿನ ಚೀಟಿ ವಿತರಣೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್ ವಿತರಿಸಿದರು.

ಈ ವೇಳೆ ಪಾನಮುಕ್ತ ಗ್ರಾಮದ ಸಾಧಕರಾದ ಹೆಗ್ನೂರು ಗ್ರಾಮದ ಗ್ರಾ.ಪಂ. ಅಧ್ಯಕ್ಷ ರಮೇಶ ರಾಮ ಗೌಡ, ಹುಕ್ಕಳ್ಳಿ ಗ್ರಾಮದ ಊರಿನ ಮುಖಂಡ ವಿನೋದ್ ಗೌಡ, ಕುಳ್ಳೆ ಗ್ರಾಮದ ಜನಜಾಗೃತಿ ಸದಸ್ಯ ಸುಭಾಷ್ ನಾಯ್ಕ್ ರವರನ್ನು ಗೌರವಿಸಲಾಯಿತು.

ಶ್ರೀಮತಿ ಸುಮಂಗಲ ಮತ್ತು ಯೋಜನೆಯ ಕೇಂದ್ರ ಕಛೇರಿಯ ಸಿಬ್ಬಂದಿಗಳು ಪ್ರಾರ್ಥಿಸಿದರು. ಪ್ರಾದೇಶಿಕ ನಿರ್ದೇಶಕರು ವಿವೇಕ್ ವಿ ಪಾಯಸ್ ಸ್ವಾಗತಿಸಿ, ಅಖಿಲ ಕರ್ನಾಟಕ ಜನಜಾಗೃತಿ ಯೋಜನಾಧಿಕಾರಿಗಳಾದ ನಾಗೇಶ್ ವೈ.ಎ., ಭಾಸ್ಕರ್ .ಎನ್ ಕಾರ್ಯಕ್ರಮ ನಿರೂಪಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಮೂ. ಕೊರವಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *