Wed. Nov 20th, 2024

Koppala: ತುಂಗಭದ್ರಾ ಜಲಾಶಯದ ಸ್ಟಾಪ್ ಗೇಟ್ ಅಳವಡಿಕೆ ಯಶಸ್ವಿ

ಕೊಪ್ಪಳ:(ಆ.17) ಸತತ ಎರಡು ದಿನಗಳಿಂದ ಈ ಕಾರ್ಯಾಚರಣೆ ಬಳಿಕ ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ 19ರ ಸ್ಟಾಪ್​ ಲಾಗ್ ಗೇಟ್ ನ ಮೊದಲ ಎಲಿಮೆಂಟ್ ಅಳವಡಿಕೆ ಸಕ್ಸಸ್ ಆಗಿದೆ. ಅಡ್ಡಿಯಾಗಿದ್ದ ಸ್ಕೈವಾಕ್​ ತೆರವು ಮಾಡಿದ ಬೆನ್ನಲ್ಲೇ ಮೊದಲ ಹಂತದ ಸ್ಟಾಪ್ ಗೇಟ್ ಅಳವಡಿಕೆ ಯಶಸ್ವಿಯಾಗಿದೆ.

ಇದನ್ನೂ ಓದಿ: 🛑ಬೆಳ್ತಂಗಡಿ: ತಂದೆಯ ವಿಯೋಗದ ಐದನೇ ದಿನವೇ ಮಗನೂ ಮರಣ

ತುಂಗಾಭದ್ರಾ ಜಲಾಶಯದ 19ನೇ ಕ್ರಸ್ಟ್​ ಗೇಟ್​​ನ ಚೈನ್ ಲಿಂಕ್ ಕಟ್ ಹಿನ್ನೆಲೆಯಲ್ಲಿ ಕೈಗೊಂಡಿದ್ದ ಸ್ಟಾಪ್ ಗೇಟ್ ಅಳವಡಿಕೆ ಮೊದಲ ಹಂತದಲ್ಲಿ ಯಶಸ್ವಿ ಆಗಿದ್ದು, ವರಮಹಾಲಕ್ಷ್ಮೀ ಹಬ್ಬದಂದು ಪ್ಲೇಟ್ ಕೂರಿಸಲಾಯಿತು. ಇದರಿಂದ ಸಚಿವ ಶಿವರಾಜ್ ತಂಗಡಗಿ ಹಾಗೂ ಶಾಸಕರು, ಸಂಸದರು ಸಿಬ್ಬಂದಿ, ಅಧಿಕಾರಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಈ ಸ್ಟಾಪ್ ಲಾಗ್ ಗೇಟ್​​ ಅಳವಡಿಕೆಗೆ ಎರಡು ದಿನಗಳಿಂದ ಸಿಬ್ಬಂದಿ ಹರಸಾಹಸ ಪಟ್ಟಿತ್ತು. ಕೊನೆಗೆ ಶನಿವಾರ ಅಡ್ಡಿಯಾಗಿದ್ದ ಸ್ಕೈವಾಕ್​ ತೆರವುಗೊಳಿಸಿ ಬಳಿಕ ಸ್ಟಾಪ್ ಲಾಗ್ ಗೇಟ್​ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.

ಹರಿಯೋ ನೀರಲ್ಲಿ ಎಲಿಮೆಂಟ್ ಅಳವಡಿಸೋದು ದೊಡ್ಡ ಸವಾಲಾಗಿತ್ತು. ಆದ್ರೆ ಕಾರ್ಮಿಕರು ‌ಯಶಸ್ವಿಯಾಗಿ ಅಳವಡಿಸಿದ್ದಾರೆ. ಹೀಗಾಗಿ ಕನ್ನಯ್ಯ ನಾಯ್ಡು ಸೇರಿದಂತೆ ಎಲ್ಲಾ ಸಿಬ್ಬಂದಿ ಗೆ ಧನ್ಯವಾದಗಳು ಎಂದು ಹೇಳಿ ಸಂತಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *