Wed. Nov 20th, 2024

Manipal: ಕಾರಿನಲ್ಲಿ ಮಲಗಿದ್ದ ಚಾಲಕ ಉಸಿರುಗಟ್ಟಿ ಸಾವು.!! – ಗ್ಲಾಸ್ ಸಂಪೂರ್ಣ ಮುಚ್ಚಿದ್ದೇ ಆತನ ಸಾವಿಗೆ ಕಾರಣವಾಯಿತಾ?

ಮಣಿಪಾಲ:(ಆ.17) ಕಾರಿನೊಳಗೆ ಮಲಗಿದ್ದ ಚಾಲಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಮಣಿಪಾಲದಲ್ಲಿ ಸಂಭವಿಸಿದೆ.

ಇದನ್ನೂ ಓದಿ: 🔶ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಕೆಥೋಲಿಕ್ ವಿದ್ಯಾ ಸಂಸ್ಥೆಗಳು ಮಂಗಳೂರು ಇದರ ಕಾರ್ಯದರ್ಶಿಗಳಾದ ಫಾ| ಪ್ರವೀಣ್ ಲಿಯೊ ಲಸ್ರಾದೊ


ಚಿಕ್ಕಮಗಳೂರು ಮೂಲದ ಕಾರು ಚಾಲಕ ಆನಂದ (37) ಸಾವನ್ನಪ್ಪಿದವರು.

ಈ ನತದೃಷ್ಟ ಚಾಲಕ ಚಿಕ್ಕಮಗಳೂರು ಮೂಲದ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದರು.

ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ರಾತ್ರಿ ವೇಳೆ ಕಾರಿನೊಳಗೆ ಮಲಗಿಕೊಂಡಿದ್ದರು.

ಕಾರಿನ ಗ್ಲಾಸ್ ಅನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಮಲಗಿದ್ದ ಕಾರಣ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *