Wed. Nov 20th, 2024

Shirva: ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಹಸಿರಿನ ಪರ್ವ

ಶಿರ್ವ:(ಆ.17)ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಿಡಗಳನ್ನು ಕೊಡುವ ಮತ್ತು ನೆಡುವ ಕಾಪು ತಾಲೂಕಿನ ಉಸಿರಿಗಾಗಿ ಹಸಿರು ಕಾರ್ಯಕ್ರಮವನ್ನು ಶಾಸಕರು ಮತ್ತು ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಆದ ಗುರ್ಮೆ ಸುರೇಶ್ ಶೆಟ್ಟಿ ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡುತ್ತ ಮರಗಳು, ನದಿಗಳು, ಸಂತರು ಮತ್ತು ನಮ್ಮ ಹಿರಿಯರು ಏನು ಅಪೇಕ್ಷೆಯಿಲ್ಲದೆ ಮಾಡುವ ಉಪಕಾರದ ಸ್ಮರಣೆ ಮಾಡಿ ಈ ಪೃಕ್ರತಿಯನ್ನು ಸಂರಕ್ಷಣೆ ಮಾಡಿ ಬೆಳೆಸಿ ಈ ಕೆಲಸ ವಿದ್ಯಾರ್ಥಿಗಳಾದ ನಿಮ್ಮಿಂದ ಸಾಧ್ಯ,

ಇದನ್ನೂ ಓದಿ: 🔴ಉಜಿರೆ: ಕೋಲ್ಕತ್ತಾದಲ್ಲಿ ಮೆಡಿಕಲ್ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ

ಇವತ್ತು ನಮ್ಮೆದುರಿಗೆ ಆಗುತ್ತಿರುವ ಪೃಕೃತಿಯ ತಾಪಮಾನದ ಹೆಚ್ಚಳ, ಪೃಕೃತಿ ವಿಕೋಪದಲ್ಲಾಗುವ ತೊಂದರೆ ನೋಡಿ , ಓದಿ ಏನು ಆಗುವುದಿಲ್ಲ ಜಾಗೃತರಾಗಿ ನಾವೆಲ್ಲರೂ ಬದಲಾವಣೆಯ ಹೆಜ್ಜೆ ಪ್ರಾರಂಭ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾನ್ಯ ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಮಾರ್ಗದರ್ಶನದ ಉಸಿರಿಗಾಗಿ ಹಸಿರು ತಂಡ ಮಹತ್ವದ ಹೆಜ್ಜೆ ಇಟ್ಟು ಈಗಾಗಲೆ ಕಾಪು ತಾಲೂಕಿನಲ್ಲಿ 7500 ಗಿಡ ಕೊಡುವ ಮತ್ತು ನೆಡುವ ಮುಂದಕ್ಕೂ ಕಾಪುವಿಗಾಗಿ ನಿರಂತರ ಸೇವಾ ಅಭಿಯಾನಕ್ಕೆ ನಮ್ಮೊಂದಿಗೆ ಕೈ ಜೋಡಿಸಿ, ಸಾಮಾಜಿಕ ಸೇವೆಯ ಆಸೆಯಿಂದ, ರಾಜಕೀಯಕ್ಕೆ ಬಂದಿರುವ ನನಗೆ ಈ ರೀತಿಯ ಸೇವಾ ಅವಕಾಶ ಗಳು ತೃಪ್ತಿ ನೀಡುತ್ತಿದೆ ಎಂದರು.

ಶಿರ್ವ ವಿದ್ಯಾವರ್ಧಕ ಸಂಘ ದ ಆಡಳಿತ ಅಧಿಕಾರಿಯಾದ ಪ್ರೊ. ವೈ. ಭಾಸ್ಕರ್ ಶೆಟ್ಟಿ ಯವರು ಮಾತಾಡುತ್ತ ಇಂತಹ ಅತ್ಯಗತ್ಯ ಕಾರ್ಯಕ್ರಮವನ್ನು ಆಯೋಜಿಸಿದ ಉಸಿರಿಗಾಗಿ ಹಸಿರು ತಂಡ ಮತ್ತು ಸಹಕರಿಸಿದ ಎಲ್ಲರಿಗೂ ಕ್ರತಜ್ಞತೆ ಸಲ್ಲಿಸಿದರು. ಹಿಂದೂ ಪದವಿ ಪೂರ್ವ ಕಾಲೇಜು ಮತ್ತು ಪೌಢಶಾಲೆ ಶಿರ್ವ ಹಾಗೂ ಉಸಿರಿಗಾಗಿ ಹಸಿರು ಸಂಘಟನೆ ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಹಿಂದೂ ಪದವಿ ಪೂರ್ವ ಕಾಲೇಜು ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹಿಂದೂ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಸಂತಿ, ಪ್ರಾಂಶುಪಾಲರಾದ ಭಾಸ್ಕರ ಎ, ಡಾ। ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ ಸದಸ್ಯರಾದ ಸಂತೋಷ್ ಎಂ ಶೆಟ್ಟಿಗಾ‌ರ್ ಹಾಗೂ ಪ್ರೌಢ ಶಾಲಾ ಶಿಕ್ಷಕರು, ಕಾಲೇಜಿನ ಉಪನ್ಯಾಸಕರು ಸುಂದರ ಮೇರಾ, ಎನ್ ಎಸ್‌ ಎಸ್ ಯೋಜನಾಧಿಕಾರಿ ಶ್ರೀಮತಿ ವೀಣಾ ನೋಡಲ್‌ ಶಿಕ್ಷಕ, ಗಣೇಶ್ ಶೆಟ್ಟಿ ಎನ್ ಸಿ ಸಿ ಸಹಾಯಕ ಅಧಿಕಾರಿ ಮತ್ತು ವಿದ್ಯಾರ್ಥಿಗಳ ಕೈ ಜೋಡುವಿಕೆಯಿಂದ ಕಾರ್ಯಕ್ರಮ ನಡೆಸಲಾಯಿತು.

Leave a Reply

Your email address will not be published. Required fields are marked *