ಬದಿಯಡ್ಕ:(ಆ.18) ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಲೆತ್ನಿಸಿದ ಪ್ರಕರಣದಲ್ಲಿ ಬಂಧಿತ ಆರೋಪಿಗೆ ರಿಮಾಂಡ್ ವಿಧಿಸಲಾಗಿದೆ. ಉಪ್ಪಿನಂಗಡಿ ನಿವಾಸಿ ಇಬ್ರಾಹಿಂರ ಪುತ್ರ ಅಬ್ದುಲ್ ಕರೀಂ(40ವ) ಬಂಧಿತನಾಗಿ ಇದೀಗ ರಿಮಾಂಡಿಗೊಳಗಾದ ಆರೋಪಿ. ಈತ ಉಸ್ತಾದ್ ಆಗಿದ್ದಾನೆಂದು ತಿಳಿದುಬಂದಿದೆ. ಶನಿವಾರ ಈ ಘಟನೆ ನಡೆದಿದೆ.


ಇದನ್ನೂ ಓದಿ: ⚖Daily Horoscope ಇಂದು ಈ ರಾಶಿಯವರು ವಿದೇಶಕ್ಕೆ ತೆರಳುವ ಆಲೋಚನೆಯನ್ನು ಮಾಡುವಿರಿ


ಕುಂಬಳೆಯಿಂದ ಬದಿಯಡ್ಕ ಭಾಗಕ್ಕೆ ಬರುತ್ತಿದ್ದ ಖಾಸಗಿ ಬಸ್ಸು ಸೀತಾಂಗೋಳಿ ಸ್ಟಾಪ್ ದಾಟಿದ ಕೂಡಲೇ ಆರೋಪಿ ಕಿರುಕುಳ ನೀಡಲೆತ್ನಿಸಿದ್ದನು. ವಿದ್ಯಾರ್ಥಿನಿ ಪ್ರತಿಭಟಿಸಿದಾಗ ಇತರ ಪ್ರಯಾಣಿಕರು ಮದ್ಯ ಪ್ರವೇಶಿಸಿದರು.

ಅನಂತರ ಆರೋಪಿಯನ್ನು ಬದಿಯಡ್ಕ ಪೊಲೀಸರಿಗೆ ಒಪ್ಪಿಸಲಾಯಿತು. ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರಿಪಡಿಸಿದರು. ಆರೋಪಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯದರ್ಶಿ ಅವಿನಾಶ್ ವಿ ರೈ ಒತ್ತಾಯಿಸಿದ್ದಾರೆ.

