Wed. Nov 20th, 2024

Beltangady: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಕಾನೂನು ಕ್ರಮಕ್ಕೆ ಅನುಮತಿ ನೀಡಿರುವ ಸಂವಿಧಾನ ಬಾಹಿರವನ್ನು ಖಂಡಿಸುತ್ತೇವೆ – ಎಂ.ಕೆ. ಅಬ್ದುಲ್ ಸಮದ್

ಬೆಳ್ತಂಗಡಿ:(ಆ.18) ಕರ್ನಾಟಕ ರಾಜ್ಯದ ಮಾಣಿಕ್ಯ, ಬಡವರ ಬಂಧು, ಬಡವರ ವ್ಯಕ್ತಿ, ಕರ್ನಾಟಕದ ಶಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಕಾನೂನು ಕ್ರಮಕ್ಕೆ ಅನುಮತಿ ನೀಡಿರುವ ಸಂವಿಧಾನ ಬಾಹಿರ ನಡೆಯನ್ನು ಖಂಡಿಸುತ್ತೇನೆ ರಾಜ್ಯ ಸರಕಾರ ಜನಪರ ಕಾರ್ಯಕ್ರಮದ ಮೂಲಕ ನಾಡಿನ ಜನತೆಯ ವಿಶ್ವಾಸ ಗಳಿಸಿದೆ.

ಇದನ್ನೂ ಓದಿ; 🔴ಬೆಳ್ತಂಗಡಿ: ಬೆಳ್ತಂಗಡಿಯ 77 ಮೊಹಲ್ಲಾಗಳ ಖಾಝಿಯಾಗಿ ಎ.ಪಿ ಉಸ್ತಾದ್ ಅಧಿಕಾರ ಸ್ವೀಕಾರ

ಈ ದ್ವೇಷ ರಾಜಕೀಯ ಸತ್ಯದ ಮುಂದೆ ಸೋಲಲಿದೆ ಮಾನ್ಯ ಮುಖ್ಯಮಂತ್ರಿಗಳ ಪರವಾಗಿ ಕರ್ನಾಟಕದ ರಾಜ್ಯದ ಜನರು ಪ್ರತಿಯೊಬ್ಬರು ನಿಲ್ಲಲಿದ್ದಾರೆ. ಸತ್ಯ ಗೆಲ್ಲಲಿದೆ ಸುಳ್ಳು ಸೋಲಲಿದೆ. ಕರ್ನಾಟಕ ರಾಜ್ಯದ ಜನತೆಯ ಪ್ರತಿಯೊಬ್ಬ ನಾಗರಿಕರ ಪ್ರಾರ್ಥನೆ ಮತ್ತು ಶಕ್ತಿ ಅವರಿಗಿದೆ.

ರಾಜಕೀಯದಲ್ಲಿ ಅವರನ್ನು ಮುಗಿಸಲು ಯಾವ ಷಡ್ಯಾಂತ್ರ ಮಾಡಿದರೂ ಅದು ಏನು ನಡೆಯಲ್ಲ, ಇದು ಪ್ರತಿಯೊಬ್ಬ ಅವರ ಎದುರಾಳಿಗೆ ನೆನಪಿರಲಿ ಅವರನ್ನು ಏನು ಮಾಡಲು ಸಾಧ್ಯವಿಲ್ಲ ಅವರಿಗೆ ಭಗವಂತನ ಆಶೀರ್ವಾದ ಇದೆ, ಬಡವರ ಪ್ರಾರ್ಥನೆ ಇದೆ ಎಂದು ಬೆಳ್ತಂಗಡಿ ಸೇವಾದಳ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ.ಕೆ. ಅಬ್ದುಲ್ ಸಮದ್ ಕುಂಡಡ್ಕ ಹೇಳಿದರು.

Leave a Reply

Your email address will not be published. Required fields are marked *