Wed. Nov 20th, 2024

Congress Guarantees : ಪ್ರತೀ ತಿಂಗಳು ಗ್ಯಾರಂಟಿ ಯೋಜನೆಗೆ ಖರ್ಚಾಗೋ ಹಣವೆಷ್ಟು ಗೊತ್ತಾ? ಬಿಲ್ ನೋಡಿ ಸರ್ಕಾರವೇ ಶಾಕ್!!!

Congress guarantees:(ಆ.18) ರಾಜ್ಯ ಸರ್ಕಾರ ನೀಡಿದ ಉಚಿತ ಗ್ಯಾರಂಟಿಗಳಿಂದ ಕರ್ನಾಟಕ ಖಜಾನೆ ಖಾಲಿಯಾಗಿದೆ. ಬೆಲೆ ಏರಿಕೆ ಮಾಡಿದರೂ ವಾರ್ಷಿಕವಾಗಿ 1 ಲಕ್ಷ ಕೋಟಿ ರೂಪಾಯಿ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಬಿಕ್ಕಟ್ಟು ಎದುರಾದರೂ ಹೆಣಗಾಡುತ್ತಾ ಸರ್ಕಾರ ತನ್ನ ಮರ್ಯಾದೆಯನ್ನು ಉಳಿಸಿಕೊಳ್ಳುತ್ತಿದೆ. ಅಲ್ಲದೆ ಈ ಯೋಜನೆಗಳಿಗೆ ಇದೀಗ ಪ್ರತೀ ತಿಂಗಳು ಖರ್ಚಾಗುವ ಹಣದ ಲೆಕ್ಕಾಚಾರ ನೋಡಿ ಸರ್ಕಾರವೇ ಶಾಕ್ ಆಗಿದೆ..

ಇದನ್ನೂ ಓದಿ: 🛑Maharashtra: ಕುಡಿದ ಮತ್ತಿನಲ್ಲಿ ಸೆ# ಗೆ ಬೇಡಿಕೆ

ರಾಜ್ಯ ಸರ್ಕಾರ ಜಾರಿಗೊಳಿಸಿರುವಂತಹ ಅನ್ನಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಯುವನಿಧಿ ಹಾಗೂ ಶಕ್ತಿ ಯೋಜನೆಗೆ ಕಳೆದ 8 ತಿಂಗಳಿನಿಂದ ಕೋಟಿ ಕೋಟಿ ಖರ್ಚಾಗಿದೆಯಂತೆ. ಕಳೆದ 8 ತಿಂಗಳು ಗ್ಯಾರಂಟಿ ಯೋಜನೆಗಳಿಗೆ ಆಗಿರುವಂತಹ ಖರ್ಚು ನೋಡಿದಂತಹ ಸರ್ಕಾರ, ಫುಲ್ ಶಾಕ್ ಗೆ ಒಳಗಾಗಿದೆ ಎನ್ನಲಾಗುತ್ತಿದೆ.

ಪ್ರತೀ ತಿಂಗಳು ಎಷ್ಟು ಖರ್ಚಾಗುತ್ತಿದೆ?
ಗೃಹ ಲಕ್ಷ್ಮೀ ಯೋಜನೆಗೆ ಪ್ರತಿ ತಿಂಗಳು ಕೋಟ್ಯಂತರ ರೂ ಖರ್ಚಾಗುತ್ತಿದೆಯಂತೆ. ಗೃಹ ಜ್ಯೋತಿಯ ಪ್ರಯೋಜನವನ್ನು ರಾಜ್ಯದಲ್ಲಿ 1 ಕೋಟಿ 29 ಸಾವಿರ ಮಂದಿ ಪಡೆದಿದ್ದಾರೆ. ಇನ್ನೂ ಅನ್ನಭಾಗ್ಯ ಯೋಜನೆಯಡಿ 4 ಕೋಟಿ 37 ಲಕ್ಷ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯ ಅಡಿಯಲ್ಲಿ ದಿನ ನಿತ್ಯ 62 ರಿಂದ 64 ಲಕ್ಷ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.

ಯುವನಿಧಿ ಯೋಜನೆಗೆ 5 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ಲಾಭವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ತಿಂಗಳು ಖರ್ಚಾಗುತ್ತಿರುವ ಹಣ ಅಂದಾಜು 5 ಸಾವಿರ ಕೋಟಿ ಎನ್ನಲಾಗುತ್ತಿದೆ.

ಗ್ಯಾರಂಟಿ ಯೋಜನೆಗೆ ವರ್ಷಕ್ಕೆ ಎಷ್ಟು ಖರ್ಚಾಗುತ್ತೆ?
ಕಾಂಗ್ರೆಸ್ ಅಧಿಕಾರಕ್ಕೇರಲು ಕರ್ನಾಟಕದಲ್ಲಿ 5 ಉಚಿತ ಗ್ಯಾರಂಟಿ ಭರವಸೆ ನೀಡಿತ್ತು. ಇದರಂತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ 5 ಉಚಿತ ಗ್ಯಾರಂಟಿಯಿಂದ ಹೈರಾಣಾಗಿದೆ. ಕೇವಲ ಗ್ಯಾರಂಟಿಗಾಗಿ ವಾರ್ಷಿಕ 50 ರಿಂದ 60 ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಸರ್ಕಾರದ ಇತರ ವೆಚ್ಚ, ವೇತನ ಸೇರಿದಂತೆ ಇತರ ಖರ್ಚು ವೆಚ್ಚಗಳಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ 1 ಲಕ್ಷ ಕೋಟಿ ರೂಪಾಯಿ ಕ್ರೋಢಿಕರಿಸಬೇಕಾಗಿದೆ.

Leave a Reply

Your email address will not be published. Required fields are marked *