Thu. Dec 26th, 2024

Daily Horoscope ಇಂದು ಈ ರಾಶಿಯವರು ವಿದೇಶಕ್ಕೆ ತೆರಳುವ ಆಲೋಚನೆಯನ್ನು ಮಾಡುವಿರಿ.

Daily Horoscope - ಇಂದು ಈ ರಾಶಿಯವರಿಗೆ ಆತುರವೇ ಅಪಾಯ ತಂದೊಡ್ಡಬಹುದು

ಮೇಷ ರಾಶಿ: ಇಂದು ಮನೆಯ ಹಲವು ಕಾರ್ಯಗಳನ್ನು ಒಬ್ಬರೇ ಮಾಡಬೇಕಾಗುವುದು. ಸೌಕರ್ಯಗಳಿಂದ ಜಾಡ್ಯವು ಬರಬಹುದು. ಸಾಮಾಜಿಕ ಕ್ಷೇತ್ರದಲ್ಲಿ ವಿಶ್ವಾಸದ ದುರುಪಯೋಗವಾಗಬಹುದು.

ವೃಷಭ ರಾಶಿ: ಇಂದು ಆತ್ಮವಿಶ್ವಾಸವು ಎಲ್ಲ ಕೆಲಸವೂ ಬೇಗ ಮುಗಿಯುವಂತೆ ಮಾಡುವುದು. ಪ್ರಯಾಣಕ್ಕಾಗಿ ಖರ್ಚು ಹಾಗೂ ಅನಾರೋಗ್ಯವನ್ನು ಸರಿಮಾಡಿಕೊಳ್ಳೂ ಖರ್ಚು ಮಾಡಬೇಕಾಗಬಹುದು. ಅವಿವಾಹಿತರು ಯೋಗ್ಯ ಸಂಬಂಧವನ್ನು ನಿರೀಕ್ಷಿಸಬಹುದು.

ಮಿಥುನ ರಾಶಿ: ಇಂದು ನಿಮ್ಮ ಮನಸ್ಸಿಗೆ ಬೇಕಾದ ವಿಶ್ರಾಂತಿಗೆ ಸ್ಥಳದ ಅನ್ವೇಷಣೆ ಮಾಡುವಿರಿ. ಅಪವಾದದಿಂದ ದೂರವಿರಬೇಕು ಎಂದರೂ ಏನಾದರೂ ಬಂದು ಸುತ್ತಿಕೊಳ್ಳುವುದು. ನಿರುದ್ಯೋಗಿಗಳು ಸ್ನೇಹಿತರ ಜೊತೆ ಚರ್ಚಿಸಿ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವರು.

ಕರ್ಕಾಟಕ ರಾಶಿ: ಇಂದು ನಿಮ್ಮ ಅಸತ್ಯದ ಮಾತು ಎಲ್ಲರಿಗೂ ತಿಳಿಯುವುದು. ತಂದೆಯಿಂದ ನಿಮಗೆ ಹಿತಕರವಾಗದ ಮಾತುಗಳನ್ನು ಕೇಳಬೇಕಾದೀತು. ನಿಮ್ಮ ಕೋಪವನ್ನು ಆದಷ್ಟು ಕಡಿಮೆ‌ಮಾಡಿಕೊಳ್ಳುವುದು ಉತ್ತಮ.

ಸಿಂಹ ರಾಶಿ: ಇಂದು ಮಾಡಬೇಕಾದುದನ್ನು ಮಾಡಿ. ಅನಂತರ ಕೊರಗುತ್ತ ಇರುವುದು ಬೇಡ. ಇಂದಿನ ದಿನವು ಸುತ್ತಾಟದಲ್ಲಿ ಕಳೆಯಬಹುದು. ವಿವಾಹಕ್ಕೆ ಕಾದು ಕುಳಿತ ವ್ಯಕ್ತಿಗಳು ಇನ್ನೂ ಸ್ವಲ್ಪ ದಿನ ಕಾಯಬೇಕಾಗುವುದು.

ಕನ್ಯಾ ರಾಶಿ: ಪ್ರಶಂಸೆಯಿಂದ ನೀವು ಸಂತೋಷಗೊಳ್ಳುವಿರಿ. ನೀವು ಹೂಡಿಕೆಯನ್ನು ಗೌಪ್ಯವಾಗಿ ಇಡಲಾಗದು. ಅನಂತರ ಪಶ್ಚಾತ್ತಾಪ ಪಡಬೇಕಾಗುವುದು. ನಿಮ್ಮನ್ನು ಹುಡುಕಿಕೊಂಡು ಬರುವ ಖರ್ಚುಗಳು ಭಯಭೀತರನ್ನಾಗಿ‌ ಮಾಡೀತು.

ತುಲಾ ರಾಶಿ: ನಿಮ್ಮ ಸಂತೋಷವನ್ನು ಕಹಿಯಾದ ಮಾತುಗಳು ಇಂದು ಕಸಿದುಕೊಳ್ಳಬಹುದು. ನೀವು ಇಂದು ಇತರರ ದೃಷ್ಟಿಯಲ್ಲಿ ಸಣ್ಣ ಮನಸ್ಸಿನವರಂತೆ ಕಾಣಿಸುವಿರಿ. ಸಹೋದ್ಯೋಗಿಗಳ ಸಹವಾಸದಿಂದ ದುಶ್ಚಟಕ್ಕೆ ಬೀಳುವವರಿದ್ದೀರಿ.

ವೃಶ್ಚಿಕ ರಾಶಿ: ಇಂದು ಸಾಮಾಜಿಕ ಕಾರ್ಯಗಳಿಂದ ಸಂತೋಷವೂ ಹೊಸತನವೂ ನಿಮಗೆ ಸಿಗಲಿದೆ. ಸಂಗಾತಿಯ ಕಾರಣದಿಂದ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಉದ್ಯೋದಲ್ಲಿ ಉಂಟಾದ ರಾಜಕೀಯ ಉನ್ನತಿಗೆ ಆಪ್ತರಿಂದ ಪ್ರಶಂಸೆ ಸಿಗಬಹುದು.

ಧನು ರಾಶಿ: ಇಂದು ಸಹಾಯ ಮಾಡುವ ನಿಮ್ಮ ನಿರಂತರ ಅಭ್ಯಾಸಕ್ಕೆ ನಿಮಗೆ ದಣಿವಾಗಬಹುದು.ಸಂಗಾತಿಯು ನಿಮ್ಮ ಎಲ್ಲ ವಿಷಯಕ್ಕೂ ತಗಾದೆ ತೆಗೆಯಬಹುದು. ನಿಮ್ಮ ಬಗ್ಗೆ ತಿಳಿಯದೇ ಮನೆಯಲ್ಲಿ ಆತಂಕ ಸೃಷ್ಟಿಯಾಗಬಹುದು.

ಮಕರ ರಾಶಿ: ನೀವು ಇಂದು ಅನಗತ್ಯ ವಾದಗಳಿಗೆ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವುದರ ಜೊತೆ ಹೆಸರೂ ಹಾಳಾಗುವುದು. ನಿಮ್ಮ ಪ್ರಯಾಣವು ಆಕಸ್ಮಿಕವಾಗಬಹುದು. ಹೆಚ್ಚಿ ವಿದ್ಯಾಭ್ಯಾಸಕ್ಕೆ ಬೇರೆಡೆಗೆ ತೆರಳುವ ಮನಸ್ಸು ಬರುವುದು.

ಕುಂಭ ರಾಶಿ: ಇಂದು ನಿಮ್ಮ ಉದಾರತೆಯು ಖರ್ಚಿನಿಂದ ಆರಂಭವಾಗುವುದು. ಹಳೆಯ ಸಂಪತ್ತನ್ನು ನೀವು ಬಳಸಬೇಕಾಗುವುದು. ಬೌದ್ಧಿಕ ಕಸರತ್ತನ್ನು ಮಾಡಲು ಹೋಗಿ ತಲೆಕೆಡಿಸಿಕೊಳ್ಳುವಿರಿ. ಬೆಳಗಿನಿಂದಲೇ‌ ನೀವು ಮೋಜಿನ ಮಾನಸಿಕತೆಯನ್ನು ಬೆಳೆಸಿಕೊಂಡಿರುವಿರಿ.

ಮೀನ ರಾಶಿ: ಇಂದು ನಿಮ್ಮ ಸಂತೋಷದ ಕ್ಷಣಗಳನ್ನು ನೀವೇ ಸೃಷ್ಟಿಸಿಕೊಳ್ಳುವಿರಿ. ಒತ್ತಡದ ಕಾರಣದಿಂದ ಕಲಹ,‌ ಮನಸ್ತಾಪಗಳು ಕಾಣಿಸುವುದು. ಆಕಸ್ಮಿಕವಾಗಿ ನೀವು ಆಪ್ತರ ಅಗಲುವಿಕೆಯ ವಾರ್ತೆಯನ್ನು ‌ಕೇಳುವಿರಿ.

Leave a Reply

Your email address will not be published. Required fields are marked *