Tue. Apr 8th, 2025

Puttur: ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾಗಿ ವಿದ್ಯಾಧರ ಜೈನ್ ನೇಮಕ

ಪುತ್ತೂರು:(ಆ.18) ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ನೂತನ ಉಪಾಧ್ಯಕ್ಷರಾಗಿ ಉಪ್ಪಿನಂಗಡಿಯ ವಿದ್ಯಾಧರ್ ಜೈನ್ ನೇಮಕಗೊಂಡಿದ್ದಾರೆ. ಬಿಜೆಪಿ ಗ್ರಾಮಾಂತರ ಮಂಡಲದ ನೂತನ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಅವರು ಹೊಸದಾಗಿ, ಆರು ಉಪಾಧ್ಯಕ್ಷರು, ಆರು ಕಾರ್ಯದರ್ಶಿ, ಓರ್ವ ಕೋಶಾಧಿಕಾರಿ ಮತ್ತು ಓರ್ವ ಕಾರ್ಯಾಲಯ ಕಾರ್ಯದರ್ಶಿಯನ್ನು ನೇಮಕ ಮಾಡಿದ್ದು ,ಇದರಲ್ಲಿ ವಿದ್ಯಾಧರ್ ಜೈನ್ ಅವರೂ ಅವಕಾಶ ಪಡೆದಿದ್ದಾರೆ.

ಇದನ್ನೂ ಓದಿ: 🔶ಉಜಿರೆ: ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಉಜಿರೆ ವರ್ತಕರ ಕುಟುಂಬ ಮಿಲನ

ವಿದ್ಯಾಧ‌ರ್ ಜೈನ್ ಅವರು ಉಪ್ಪಿನಂಗಡಿಯ ಶ್ರೀ ಪದ್ಮ ವಿದ್ಯಾ ಪೆಟ್ರೋಲ್ ಬಂಕ್ ಮಾಲಕರಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಡಾಡ್ಜ್ ಬಾಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾಗಿ,

ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಮೊಸರು ಕುಡಿಕೆ ಉತ್ಸವ ಸಮಿತಿಯ ಕಾರ್ಯದರ್ಶಿಯಾಗಿ, ಟೀಮ್ ದಕ್ಷಿಣ ಕಾಶಿಯ ಉಪಾಧ್ಯಕ್ಷರಾಗಿ, ವಿಜಯ-ವಿಕ್ರಮ ಕಂಬಳ ಸಮಿತಿಯ ಉಪಾಧ್ಯಕ್ಷರಾಗಿ, ರಾಮನಗರ ಶ್ರೀ ಶಾರದೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ,

ಇಂದ್ರಪ್ರಸ್ಥ ವಿದ್ಯಾಲಯದ ಸದಸ್ಯರಾಗಿ, ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸದಸ್ಯರಾಗಿ, ಪುತ್ತೂರಿನ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಸದಸ್ಯರಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.

Leave a Reply

Your email address will not be published. Required fields are marked *